ಕರ್ನಾಟಕ

karnataka

ETV Bharat / state

ಶೇ.75ರಷ್ಟು ಲಾಕ್​​​ಡೌನ್​​​​ ಸಡಿಲಿಕೆಗೆ ಸರ್ಕಾರದ ಚಿಂತನೆ: ಡಿಸಿಗಳ ಜೊತೆ ಸಮಾಲೋಚನೆ - lockdown

ಸೋಮವಾರದಿಂದ ರಾಜ್ಯದಲ್ಲಿ ಶೇ.75ರಷ್ಟು ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಹುತೇಕ ಸಮೂಹ ಸಾರಿಗೆ, ಕ್ಯಾಬ್​​ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲು ಸರ್ಕಾರ ಮುಂದಾಗಿದೆ.

ವಿಧಾನಸೌಧ
ವಿಧಾನಸೌಧ

By

Published : May 15, 2020, 9:36 PM IST

ಬೆಂಗಳೂರು:ನಾಳೆ ಕೇಂದ್ರದಿಂದ ಹೊಸ ರೂಪದ ಲಾಕ್‌ಡೌನ್​​ನ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ಇದ್ದು, ರಾಜ್ಯ ಸರ್ಕಾರ ನಾಲ್ಕನೇ ಹಂತದ ಲಾಕ್‌ಡೌನ್​​ನಲ್ಲಿ ಇನ್ನಷ್ಟು ಸಡಿಲಿಕೆ‌ ಮಾಡುವ ತಯಾರಿ ನಡೆಸಿದೆ.

ರಾಜ್ಯದ ಜನಜೀವನ 55 ದಿನಗಳ ನಂತರ ಮರಳಿ ಹಳಿಗೆ ಬರುತ್ತಿದೆ. ಸೋಮವಾರದಿಂದ ರಾಜ್ಯದಲ್ಲಿ ಶೇ.75ರಷ್ಟು ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಹುತೇಕ ಸಮೂಹ ಸಾರಿಗೆ, ಕ್ಯಾಬ್​​ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲು ಸರ್ಕಾರ ಮುಂದಾಗಿದೆ. ಕೇಂದ್ರದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಇನ್ನಷ್ಟು ಸಡಿಲಿಕೆ ಮಾಡಲು ಸಜ್ಜಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದು ನಡೆದ ಡಿಸಿಗಳ ಜೊತೆಗಿನ‌ ವಿಡಿಯೋ ಸಂವಾದದಲ್ಲೂ ಈ ಬಗ್ಗೆ ಸಮಾಲೋಚನೆ ನಡೆದಿದೆ. ಲಾ್ಕ್​​ಡೌನ್‌ನಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಿದ್ದು, ಈ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಏನೆಲ್ಲ ಸಡಿಲಿಕೆ ಸಾಧ್ಯತೆ?:

- ವಾಣಿಜ್ಯ ಚಟುವಟಿಕೆಗೆ ಪೂರ್ಣ ವಿನಾಯ್ತಿ

- ಹೋಟೆಲ್​​, ಪಬ್, ಮಾಲ್​​ಗಳಿಗೆ ಅವಕಾಶ

- ಆನ್‌ಲೈನ್ ಡೆಲಿವರಿ ಸೇವೆ ಪುನಾರಂಭ ಸಾಧ್ಯತೆ

- ಓಲಾ, ಉಬರ್, ಕ್ಯಾಬ್, ಆಟೋಗಳ ಸಂಚಾರ

- ಬಿಎಂಟಿಸಿ, ಕೆಎಸ್ ಆರ್ ಟಿಸಿ, ಖಾಸಗಿ ವಾಹನಗಳ ನಿರ್ಬಂಧಿತ ಓಡಾಟ ಸಾಧ್ಯತೆ

- ಅಂಗಡಿ ಮುಂಗಟ್ಟುಗಳ ಪೂರ್ಣ ಪ್ರಮಾಣದ ವಹಿವಾಟಿಗೆ ಅವಕಾಶ

- ಸಲೂನ್, ಜಿಮ್, ಬ್ಯೂಟಿ ಪಾರ್ಲರ್ ಓಪನ್

- ದೇವಸ್ಥಾನಗಳಿಗೆ ನಿರ್ಬಂಧಿತ ಅನುಮತಿ ಸಾಧ್ಯತೆ

- ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಸೇವೆಗೆ ಅವಕಾಶ

ಯಾವುದಕ್ಕೆ ಅವಕಾಶ ಡೌಟ್?:

- ಪಬ್, ಡಿಸ್ಕೊಟೆಕ್​​​​​​​​​ಗಳಿಗಿಲ್ಲ ಅವಕಾಶ

- ಮೆಟ್ರೋ ರೈಲು ಸಂಚಾರ, ವಿಮಾನ ಹಾರಾಟಕ್ಕೆ ಸದ್ಯಕಿಲ್ಲ ಮುಕ್ತಿ

- ಸಿನಿಮಾ ಥಿಯೇಟರ್​​ಗಳಿಗಿಲ್ಲ ಅವಕಾಶ

- ಧಾರ್ಮಿಕ ಸಭೆ, ಸಮಾರಂಭ, ಪ್ರಾರ್ಥನೆ ಮೇಲಿನ ನಿರ್ಬಂಧ ಮುಂದುವರಿಕೆ.

ABOUT THE AUTHOR

...view details