ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು ಸರ್ಕಾರಕ್ಕೆ ನಾಚಿಗೆ ಆಗುತ್ತೋ ಇಲ್ಲವೋ ನಮಗಂತೂ ನಾಚಿಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಕಿಡಿಕಾರಿದ್ದಾರೆ.
ಶಿಕ್ಷಣ ಇಲಾಖೆಯ ಭ್ರಷ್ಟಚಾರ ನೋಡಿ ಸರ್ಕಾರಕ್ಕೆ ನಾಚಿಗೆ ಆಗುತ್ತೋ ಇಲ್ಲವೋ:ಅರುಣ್ ಶಹಾಪುರ ಕಿಡಿ - ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು ಸರ್ಕಾರಕ್ಕೆ ನಾಚಿಗೆ ಆಗುತ್ತೋ ಇಲ್ಲವೋ ನಮಗಂತೂ ನಾಚಿಕೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ
ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಪಿಯು ಮಂಡಳಿ ಸತ್ತು ಹೋಗಿದೆ, ವರ್ಗಾವಣೆ ಬಗ್ಗೆ ಯಾರು ನಿರ್ಣಯ ಕೈಗೊಳ್ಳಬೇಕು ಎನ್ನುವುದೇ ಗೊತ್ತಿಲ್ಲ. ಪ್ರಭಾರ ಆಯುಕ್ತ ಜಾಫರ್ ಪರೀಕ್ಷೆಗಳನ್ನು ಮಾಡಿ ಮುಗಿಸುತ್ತಿದ್ದಾರೆ. ಹೊಸ ಕಾಲೇಜುಗಳಿಗೆ ಅನುಮತಿ,ಇರುವ ಕಾಲೇಜುಗಳ ಸೀಟು ಹೆಚ್ಚಿಸಲು ಅನುಮತಿ,ಹೆಚ್ಚುವರಿ ವಿಭಾಗ, ಹೊಸ ಕಾಂಬಿನೇಷನ್ಗೆ ಅನುಮತಿ ಕೋರಿ ಬಂದಿರುವ ಕಡತಗಳು ಧೂಳು ಹಿಡಿಯುತ್ತಿವೆ ಕೂಡಲೇ ಈ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.