ಕರ್ನಾಟಕ

karnataka

ಜಿಕೆವಿಕೆ ಕೃಷಿ ಮೇಳಕ್ಕೆ ತೆರೆ: 17 ಲಕ್ಷಕ್ಕೂ ಅಧಿಕ ಮಂದಿ ಭೇಟಿ, ₹9 ಕೋಟಿ ವಹಿವಾಟು

By

Published : Nov 7, 2022, 7:12 AM IST

ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ನಡೆದ ಕೃಷಿ ಮೇಳ-2022ಕ್ಕೆ ತೆರೆ. 17.35 ಲಕ್ಷಕ್ಕೂ ಹೆಚ್ಚು ಜನ ಭೇಟಿ. 9.01 ಕೋಟಿ ರೂಪಾಯಿ ವಹಿವಾಟು.

GKVK Krishi Mela
ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ

ಯಲಹಂಕ(ಬೆಂಗಳೂರು):ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ನಡೆದ ಕೃಷಿ ಮೇಳ-2022ಕ್ಕೆ ಭಾನುವಾರ ತೆರೆ ಬಿತ್ತು. ನಾಲ್ಕು ದಿನಗಳ ಕಾಲ ನಡೆದ ಮೇಳಕ್ಕೆ 17.35 ಲಕ್ಷ ಜನರು ಭೇಟಿ ನೀಡಿದ್ದಾರೆ.

1966ರಲ್ಲಿ ಪ್ರಾರಂಭವಾದ ಕ್ಷೇತ್ರೋತ್ಸವ ನಂತರ ಕೃಷಿ ಮೇಳವಾಗಿ ಪರಿವರ್ತನೆಗೊಂಡು ಅತ್ಯಂತ ಜನಪ್ರಿಯವಾಗಿದೆ. 'ಕೃಷಿಯಲ್ಲಿ ನವೋದ್ಯಮಗಳು' ಎಂಬುದು ಈ ಬಾರಿಯ ಘೋಷ ವಾಕ್ಯವಾಗಿತ್ತು. ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡಿ ಕೃಷಿ ಮೇಳದ ಯಶಸ್ವಿಗೆ ಕಾರಣರಾದರು.

ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ

ಇದನ್ನೂ ಓದಿ:ಕೊಟ್ಟಿಗೆ ತೊಳೆಯಲು, ಹಾಲು ಕರೆಯಲು ಬಂದಿದೆ ಸೋಲಾರ್ ಯಂತ್ರ

17 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ: ಉದ್ಘಾಟನೆಗೊಂಡ ದಿನದಂದು(ನ.3) ಮಳೆಯ ಕಾರಣ ಕೇವಲ 1.60 ಲಕ್ಷ ಜನರು ಆಗಮಿಸಿದ್ದರು. ಎರಡನೇ ದಿನ 2.45 ಲಕ್ಷ, ಮೂರನೇ ದಿನ ವಾರಾಂತ್ಯವಾಗಿದ್ದರಿಂದ ದಾಖಲೆಯ 7.16 ಲಕ್ಷ ಹಾಗೂ ಕೊನೆಯ ದಿನ 6.14 ಲಕ್ಷ ಜನರು ಭೇಟಿ ನೀಡಿದ್ದಾರೆ. ಒಟ್ಟಾರೆ ನಾಲ್ಕು ದಿನದಲ್ಲಿ 17.35 ಲಕ್ಷ ಜನರು ಕೃಷಿ ಮೇಳದ ಅನುಭವ ಪಡೆದಿದ್ದಾರೆ. ಈ ಅವಧಿಯಲ್ಲಿ 9.01 ಕೋಟಿ ರೂ. ವಹಿವಾಟು ನಡೆದಿದೆ. ಕೃಷಿ ವಿಶ್ವವಿದ್ಯಾಲಯದಿಂದ ರಿಯಾಯಿತಿ ದರದಲ್ಲಿ ವ್ಯವಸ್ಥೆ ಮಾಡಿದ ಭೋಜನಾಲಯದಲ್ಲಿ ಒಟ್ಟು 43.50 ಸಾವಿರ ಜನರು ಊಟ ಸೇವಿಸಿದ್ದಾರೆ.

ಇದನ್ನೂ ಓದಿ:ಈ ಗಿರಿರಾಜ ಕೋಳಿ ಬೆಲೆ 50 ಸಾವಿರ ರೂ...!

ABOUT THE AUTHOR

...view details