ಬೆಂಗಳೂರು:ರಸ್ತೆ ಬಳಿ ಆಟವಾಡುತ್ತಿದ್ದ ಮಗು ವಿದ್ಯುತ್ ಕಂಬ ಮುಟ್ಟಿದ ಕಾರಣ ಕರೆಂಟ್ ಶಾಕ್ ಹೊಡೆದು ಬಾಲಕಿ ಮೃತಪಟ್ಟಿರುವ ಘಟನೆ ನಗರದ ಕಾವಲಭೈರಸಂದ್ರದ ಬಳಿ ನಡೆದಿದೆ. 8 ವರ್ಷದ ಫಾತಿಮಾ ಮೃತ ಬಾಲಕಿ.
ವಿದ್ಯುತ್ ಶಾಕ್ ಹೊಡೆದು ಆಟವಾಡುತ್ತಿದ್ದ ಬಾಲಕಿ ಸಾವು - ಬೆಂಗಳೂರು ಅವಘಡ ಸುದ್ದಿ
ಮಳೆ ನಿಂತ ನಂತರ ಬಾಲಕಿ ಆಟವಾಡಲು ಮನೆಯ ಹೊರಗಡೆಯ ರಸ್ತೆ ಬಳಿ ಬಂದಿದ್ದಾಳೆ. ಆಟವಾಡ್ತಾ ವಿದ್ಯುತ್ ಕಂಬ ಮುಟ್ಟಿದ್ದಾಳೆ. ಮಳೆ ಬಂದು ಒದ್ದೆಯಾಗಿದ್ದ ಕಂಬದಿಂದ ವಿದ್ಯುತ್ ಶಾಕ್ ಹೊಡೆದು ಅವಘಡ ಸಂಭವಿಸಿದೆ.
girl-dies-by-electric-shock
ನಿನ್ನೆ ಸಂಜೆ ಧಾರಾಕಾರವಾಗಿ ಮಳೆ ಬರ್ತಿತ್ತು. ಮಳೆ ನಿಂತ ನಂತರ ಬಾಲಕಿ ಆಟವಾಡಲು ಮನೆಯ ಹೊರಗಡೆ ರಸ್ತೆ ಬಳಿ ಬಂದಿದ್ದಾಳೆ. ಆಟವಾಡ್ತಾ ವಿದ್ಯುತ್ ಕಂಬ ಮುಟ್ಟಿದ್ದಾಳೆ.
ಮಳೆ ಬಂದು ಮೊದಲೇ ಒದ್ದೆಯಾಗಿದ್ದ ಕಂಬದಿಂದ ವಿದ್ಯುತ್ ಶಾಕ್ ಹೊಡೆದು ಅವಘಡ ಸಂಭವಿಸಿದೆ. ವಿಚಾರ ತಿಳಿದು ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆರ್.ಟಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Last Updated : Jul 21, 2020, 8:50 AM IST