ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ರಿಷಿಕೇಶಿ ದೇವ್ಡೆಕರ್ ಅಲಿಯಾಸ್ ಮುರಳಿಯನ್ನ ನಿನ್ನೆ ಎಸ್ಐಟಿ ತಂಡ ಬಂಧಿಸಿದೆ.
ಬಯಲಾಯ್ತು ರೋಚಕ ಕಹಾನಿ:
ಬಲಪಂಥೀಯ ವಿಚಾರಧಾರೆಯನ್ನ ವಿರೋಧಿಸುವವರ ಹತ್ಯೆಗೆ ಸಂಚು ರೂಪಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ಜೊತೆ ಸೇರಿ ಗೌರಿಲಂಕೇಶ್ ಚಲನವಲನವನ್ನ ಗಮನಿಸಿಕೊಂಡಿದ್ದ ಇವರು, ಮನೆ ಮುಂದೆಯೇ ಹತ್ಯೆ ಮಾಡಲು ಸಿದ್ಧತೆ ಮಾಡಿಕೊಂಡಿದ್ರಂತೆ. ರಾತ್ರಿ ವೇಳೆ ಕತ್ತಲಲ್ಲಿ ತಪ್ಪಿಸಿಕೊಳ್ಳುವುದು ಸುಲಭ ಎಂದು ಸೆಪ್ಟೆಂಬರ್ 5ರಂದು ಆರ್ ಆರ್ ನಗರದ ಗೌರಿ ಮನೆಯ ಬಳಿ ರಾತ್ರಿ ಎಂಟ್ರಿ ಕೊಟ್ಟು ಮನೆ ಮುಂದೆಯೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.
ಕೋಡ್ ವರ್ಡ್ ಸಂಭಾಷಣೆ:
ಮುರಳಿ ಬಂಧನದಿಂದ ಹಂತಕರ ಕೋಡ್ ವರ್ಡ್ ಬಯಲಾಗಿದೆ. ಗೌರಿಯನ್ನ ಹತ್ಯೆ ಮಾಡುವ ವಿಚಾರದಲ್ಲಿ ಯಾವ ರೀತಿ ಹತ್ಯೆ ಮಾಡಬೇಕು. ಹೇಗೆ ಹತ್ಯೆ ಮಾಡಬೇಕು ಅನ್ನೋದನ್ನ ಕೋಡ್ ವರ್ಡ್ನಲ್ಲಿ ಆರೋಪಿಗಳು ಮಾತನಾಡುಕೊಳ್ಳುತ್ತಿದ್ದರಂತೆ. ಕೋಡ್ ವರ್ಡ್ ಬಳಸಿ ಕೊಲೆ ಮಾಡಿದರೆ ಪೊಲೀಸರಿಗೆ ಅಥವಾ ಗುಪ್ತಚರ ಇಲಾಖೆಗೆ ಮಾಹಿತಿ ರವಾನೆಯಾಗಲ್ಲ ಎನ್ನುವುದು ಇವರ ಪ್ಲಾನ್ ಆಗಿತ್ತಂತೆ.
ಇಲ್ಲಿವೆ ಅವರ ಕೋಡ್ ವರ್ಡ್ :
ಟಾರ್ಗೆಟ್ : 'ದುರ್ಜನ' ಅಥವಾ ತಾವು ಗುರುತಿಸಿದ ಧರ್ಮ ವಿರೋಧಿ
ಅಭ್ಯಾಸ: ಟಾರ್ಗೆಟ್ ಲಿಸ್ಟ್ ನಲ್ಲಿರುವ ವ್ಯಕ್ತಿಯ ದಿನ ನಿತ್ಯ ಚಟುವಟಿಕೆಗಳ ಮೇಲೆ ನಿಗಾ. ಆ ವ್ಯಕ್ತಿಯ ಚಲನ ವಲನಗಳ ಮೇಲೆ ನಿಗಾ ಇಟ್ಟು ಮಾಹಿತಿ ಕಲೆ ಹಾಕುವುದು.
ಬಲ್ಬ್ ಅಭ್ಯಾಸ: ಸಿಸಿಟಿವಿ ಕ್ಯಾಮರಾಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು
ಟ್ಯೂಷನ್: ತಮ್ಮ ಸಹಚರರಿಗೆ ಶಸ್ತ್ರಾಸ್ತ್ರಗಳ, ಸ್ಪೋಟಕ, ನಿಯಮಗಳ ಬೋಧನೆ
ಈವೆಂಟ್/ಕೃತಿ: ಧರ್ಮ ವಿರೋಧಿ ಚಟುವಟಿಕೆಗಳನ್ನು ಮಾಡುವರ ಮೇಲೆ ಹಿಂಸಾತ್ಮಕ ದಾಳಿ ಮಾಡುವುದು
2.5.ಈವೆಂಟ್: ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆ ದೈಹಿಕ ಗಾಯ ಮಾಡುವುದು. ಪೆಟ್ರೋಲ್ ಬಾಂಬ್ ಹಾಕಿ ಬೆದರಿಸಿ ಭಯ ಮಾಡುವ ಮೂಲಕ ಎಚ್ಚರಿಕೆ ನೀಡುವುದು
3.0 ಈವೆಂಟ್: ಧರ್ಮ ವಿರೋಧಿಗಳನ್ನು ಕೊಲೆ ಮಾಡುವುದು
ಸಾಹಿತ್ಯ: ಪಿಸ್ತೂಲ್
ಲಡ್ಡು: ಎಂದರೆ ನಾಡ ಬಾಂಬ್
ಈ ರೀತಿಯ ಕೋಡ್ ವರ್ಡ್ಸ್ ಬಳಸಿ ಗೌರಿಯನ್ನ ಕೊಲೆ ಮಾಡಿರುವ ವಿಚಾರ ಸದ್ಯ ಆರೋಪಿ ಬಾಯಿ ಬಿಟ್ಟಿದ್ದಾನೆ. ಈಗ ಬಂಧಿತನಾಗಿರುವ ದೇವ್ಡೆಕರ್ ಅಲಿಯಾಸ್ ಮುರಳಿ ಎಸ್ಐಟಿ ತಂಡ ತನ್ನ ಬೆನ್ನ ಹಿಂದೆ ಬಿದ್ದಿರುವ ವಿಷಯ ತಿಳಿದುಕೊಂಡಿದ್ದನಂತೆ. ಈ ಕಾರಣಕ್ಕಾಗಿಯೇ ಒಂದೇ ಕಡೆ ನಿಲ್ಲದೇ ಹಲವೆಡೆ ಸುತ್ತಿ ಕೊನೆಗೆ ಧನಬಾದ್ನಲ್ಲಿ ಬಲೆಗೆ ಬಿದ್ದಿದ್ದಾನೆ.