ಮಹದೇವಪುರ (ಬೆಂಗಳೂರು): ರಸ್ತೆ ಬದಿ ಕಸ ಸುರಿಯದಂತೆ ಎಚ್ಚರಿಕೆ ನೀಡಿದರೂ ಕಸ ಸುರಿದ ವ್ಯಕ್ತಿಯ ಮನೆ ಮುಂದೆಯೇ ರಾಶಿ ಕಸತಂದು ಸುರಿದು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ ಮಂಡೂರು ಗ್ರಾ.ಪಂ ವ್ಯಾಪ್ತಿಯ ಐಶ್ವರ್ಯ ಬಡವಣೆಯ ನಿವಾಸಿಯೊಬ್ಬ ರಸ್ತೆ ಬದಿಗಳಲ್ಲಿ ಕಸ ಸುರಿಯುತ್ತಿದ್ದ ಇದನ್ನು ಕಂಡ ಗ್ರಾಪಂ ಸದಸ್ಯ ಬೈರೇಶ್ ಕಸ ಹಾಕದಂತೆ ಸೂಚಿಸಿದ್ದರು.
ಬಯಲಲ್ಲಿ ಕಸ ಹಾಕಿದಾತನ ಮನೆ ಮುಂದೆ ಕಸದ ರಾಶಿ ಸುರಿದ ಪಂಚಾಯಿತಿ ಸದಸ್ಯರು
ಬಯಲಲ್ಲಿ ಕಸ ಎಸೆದ ಕಾರಣ ವ್ಯಕ್ತಿಯ ಮನೆ ಮುಂದೆಯೇ ಕಸ ತಂದು ಸುರಿಯಲಾಗಿದೆ. ಕಸ ಎಸೆಯಬಾರದು ಎಂದು ಸೂಚಿಸಿದ್ದರೂ, ಅಲ್ಲಿಯೇ ಕಸ ಎಸೆದ ಕಾರಣ ಅಸಮಾಧಾನಗೊಂಡ ಪಂಚಾಯಿತಿ ಸದಸ್ಯರು ಮನೆ ಮುಂದೆ ಕಸ ಸುರಿದಿದ್ದಾರೆ.
ಆದರೆ, ಅವರ ಮಾತು ಕೇಳದೇ ಅಲ್ಲೆ ಕಸ ಎಸೆದು ಬಂದಿದ್ದ. ಹೀಗಾಗಿ ಪಂಚಾಯಿತಿ ಸದಸ್ಯ ಸೇರಿ ಇತರ ಸಿಬ್ಬಂದಿ ಗಾಡಿಯಲ್ಲಿ ಕಸತಂದು ಆತನ ಮನೆ ಗೇಟ್ ಬಳಿಯೇ ಸುರಿದಿದ್ದಾರೆ. ಈ ವೇಳೆ ಮನೆ ಮಾಲೀಕ ಹಾಗೂ ಪಂಚಾಯಿತಿ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದು ಬಳಿಕ ಕಸ ಎಸೆಯದಂತೆ ಎಚ್ಚರಿಕೆ ನೀಡಿ ಅಧಿಕಾರಿಗಳು ತೆರಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸುವುದಲ್ಲದೇ ಮಾರ್ಷಲ್ಗಳನ್ನು ನೇಮಿಸಿದೆ. ಅದೇ ಮಾದರಿಯಲ್ಲಿ ಪಂಚಾಯಿತಿಯ ಕಸದ ವಾಹನಗಳು ಮನೆಯ ಬಳಿ ಬರುವಾಗ ಕಸವನ್ನು ನೀಡದೇ ಸಾರ್ವಜನಿಕ ಸ್ಥಳಗಳಲ್ಲಿ ಎಸೆದರೆ ಪಂಚಾಯಿತಿ ವತಿಯಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.