ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಪೂಜಿ ನಗರದಲ್ಲಿ ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಓರ್ವನ ಬಲಭಾಗದ ಕೈ ಕಟ್ ಮಾಡಿರುವ ಪ್ರಕರಣ ನಿನ್ನೆ ರಾತ್ರಿ ನಡೆದಿದೆ.
ಶೇಬ್ (20) ಹಲ್ಲೆಗೊಳಗಾದ ಯುವಕ. ರಾತ್ರಿ 8 ಗಂಟೆ ಸುಮಾರಿಗೆ ಬಾಪೂಜಿ ನಗರದ ಶೋಭಾ ಟೆಂಟ್ ಬಳಿ ಪ್ರಕರಣ ನಡೆದಿದೆ. ಮುಬಾರಕ್, ಸಮೀರ್ ಸೇರಿದಂತೆ ಐವರು ಯುವಕರು ಶೇಬ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.