ಕರ್ನಾಟಕ

karnataka

ETV Bharat / state

ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣ... ಇಂದು ಕಂಪ್ಲಿ ಗಣೇಶ್​ಗೆ ಸಿಗುತ್ತಾ ಜಾಮೀನು? - ಗಣೇಶ್

ಶಾಸಕ ಆನಂದ್​ ಸಿಂಗ್​ ಮೇಲಿನ ಹಲ್ಲೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್​ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಆನಂದ್​ ಸಿಂಗ್

By

Published : Mar 13, 2019, 11:20 AM IST

ಬೆಂಗಳೂರು: ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಾಸಕ ಮತ್ತು ಸಂಸದರ ವಿಶೇಷ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕಂಪ್ಲಿ ಗಣೇಶ್​ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಮೂಲಗಳ ಪ್ರಕಾರ ಗಣೇಶ್ ವಕೀಲರಿಗೆ ಇಂದು ಬಹುತೇಕ ಶಾಸಕ ಗಣೇಶ್​ಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಾಮೀನು ಸಿಕ್ಕರು, ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಕೊಳ್ಳದಂತೆ ಷರತ್ತು ವಿಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಗಣೇಶ್ ವಕೀಲರು ಅವರ ಆರೋಗ್ಯ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡಲಿದ್ದು, ವಿದೇಶದಲ್ಲಿ ಚಿಕಿತ್ಸೆಗೆ ಮನವಿ ಮಾಡಲಿದ್ದಾರೆಂದು ತಿಳಿದುಬಂದಿದೆ.

ಕಳೆದ 8ರಂದು ಕಂಪ್ಲಿ ಗಣೇಶ್ ​ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾಮಚಂದ್ರ ಡಿ. ಉದ್ದಾರ್‌ ವಿಚಾರಣೆ ನಡೆಸಿದ್ರು. ಈ ವೇಳೆ ಹಿರಿಯ ವಕೀಲ‌ ಸಿ.ಹೆಚ್. ಹನುಮಂತರಾಯಪ್ಪ ಗಣೇಶ್​ ಪರ ವಾದ ಮಂಡಿಸಿದ್ರು. ಅಂದು ಸಹ ಗಣೇಶ್​ ಅನಾರೋಗ್ಯದ ಕಾರಣ ಹೇಳಿದ್ದರಿಂದ ನ್ಯಾಯಾಮೂರ್ತಿಗಳು ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು.

ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲೇ ಶಾಸಕ ಗಣೇಶ್ ಕಾಲ ಕಳೆಯುತ್ತಿದ್ದಾರೆ. ಇವತ್ತಾದ್ರು ಜಾಮೀನು ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಲೊಕಸಭೆ ಎಲೆಕ್ಷನ್​ಘೋಷಣೆಯಾದ ಬೆನ್ನಲ್ಲೇ ರಾಜಕಾರಣಿಗಳು ಬ್ಯುಸಿಯಾಗಿದ್ದು, ತನ್ನ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋ ನೋವನ್ನ ಜೈಲಿನ ಸಿಬ್ಬಂದಿ ಬಳಿ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details