ಕರ್ನಾಟಕ

karnataka

By

Published : Mar 23, 2023, 6:59 PM IST

ETV Bharat / state

ಇನ್ಮುಂದೆ ಜನ ಸಾಮಾನ್ಯರಿಗೆ ಎಂ ಸ್ಯಾಂಡ್ ಸುಗಮವಾಗಿ ಲಭ್ಯ: ಫೆಡರೇಷನ್ ಆಫ್ ಗ್ರಾನೈಟ್ ಅಂಡ್ ಸ್ಟೋನ್ ಇಂಡಸ್ಟ್ರಿ

ರಾಜ್ಯದ ಜನರಿಗೆ ಸುಲಭ ಮತ್ತು ಕೈಗೆಟುವ ದರದಲ್ಲಿ ಎಂ ಸ್ಯಾಂಡ್ ಪೂರೈಸಲು ಸರ್ಕಾರ ನಿರ್ಧರಿಸಿದೆ.

Dr Ravindra Shetty Bajagoli
ಡಾ ರವಿಂದ್ರ ಶೆಟ್ಟಿ ಬಜಗೋಳಿ

ಬೆಂಗಳೂರು :ರಾಜ್ಯದಲ್ಲಿ ಕಟ್ಟಡ ನಿರ್ಮಾನ ಮಾಡುವವರಿಗೆ ಮರಳಿನ ಅಭಾವ ನೀಗಿಸಲು ಹಾಗೂ ಜನ ಸಾಮಾನ್ಯರಿಗೆ ಸುಲಭ ಮತ್ತು ಕೈಗೆಟುವ ದರದಲ್ಲಿ ಎಂ. ಸ್ಯಾಂಡ್ ಪೂರೈಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ನಿಯಮಗಳನ್ನು ಪರಿಪಾಲಿಸುವಂತೆ ತಮ್ಮ ಉದ್ಯಮ ವಲಯಕ್ಕೆ ಸೂಚಿಸಲಾಗಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ಮತ್ತು ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಹೇಳಿದೆ.

ಇಂದು ಪ್ರೆಸ್ ಕ್ಲಬ್​ನಲ್ಲಿ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಅಧ್ಯಕ್ಷ ಬಿ. ಉಮಾಶಂಕರ್, ಸರ್ಕಾರದ ನಿಯಮಗಳಿಂದ ರಾಜಧನ ಸೋರಿಕೆ ತಡೆಗಟ್ಟಿ, ಕಾನೂನುಬದ್ಧ ಗಣಿಗಾರಿಕೆ ನಡೆಸಲು ಮತ್ತಷ್ಟು ಅವಕಾಶ ಕಲ್ಪಿಸಿದಂತಾಗಿದೆ ಎಂದರು.

ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ 2016 ಕ್ಕಿಂತ ಮುಂಚೆ ಗಣಿಗುತ್ತಿಗೆಗೆ ಅರ್ಜಿ ಸಲ್ಲಿಸಿ ಬಾಕಿ ಇರುವ 5,000 ದಷ್ಟು ಅರ್ಜಿಗಳಿಗೆ ಕಾನೂನು ಪ್ರಕಾರ ಗಣಿಗುತ್ತಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಎಂ-ಸ್ಯಾಂಡ್ ಕ್ರಷರ್ ಘಟಕ ಪ್ರಾರಂಭಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆಯಲಾಗಿದೆ. ಎಂ-ಸ್ಯಾಂಡ್ ಕ್ರಷರ್ ಘಟಕ ಹೊಂದಿರುವವರು ಸದರಿ ಕ್ರಷರ್ ಘಟಕದಿಂದ 30 ಕಿ.ಮೀ. ವ್ಯಾಪ್ತಿಯೊಳಗೆ ಎಂ- ಸ್ಯಾಂಡ್ ಉತ್ಪಾದಿಸುವುದಕ್ಕೆ ಹೊಸದಾಗಿ ಗಣಿಗುತ್ತಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಎಂ.ಸ್ಯಾಂಡ್ ಸುಗಮವಾಗಿ ದೊರೆಯಲು ಸಹಕಾರಿಯಾಗಲಿದ್ದು, ಜೊತೆಗೆ ಸರ್ಕಾರದ ನಿರ್ಮಾಣ ಕೆಲಸಗಳು, ಜನ ಸಾಮಾನ್ಯರಿಗೆ ಮನೆ ಕಟ್ಟಿಕೊಳ್ಳಲು ಸಹ ನೆರವಾಗಲಿದೆ ಎಂದು ಹೇಳಿದರು.

ಸಾಮಾನ್ಯ ಕಟ್ಟಡಕಲ್ಲು ಗಣಿಗುತ್ತಿಗೆ ಅವಧಿಯನ್ನು 20 ರಿಂದ 30 ವರ್ಷಗಳಿಗೆ ಹಾಗೂ ಅಲಂಕಾರಿಕ ಕಲ್ಲಿನ ಗಣಿ ಗುತ್ತಿಗೆ 30 ವರ್ಷಗಳಿಂದ 50 ವರ್ಷಗಳಿಗೆ ವಿಸ್ತರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಗಣಿಗುತ್ತಿಗೆ ಪ್ರದೇಶದ ಗಡಿ ಬಾಂದುಗಳಲ್ಲಿ ವ್ಯತ್ಯಾಸವಿದ್ದಲ್ಲಿ, ಅವುಗಳನ್ನು ಒಂದು ಬಾರಿ ಸರಿಪಡಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗು ಅಕ್ಕ ಪಕ್ಕದಲ್ಲಿರುವ ಗಣಿಗುತ್ತಿಗೆ ಪ್ರದೇಶಗಳನ್ನು ಸಂಯೋಜಿಸಲು ಮತ್ತು ನಡುವೆ ಇರುವ ಖಾಲಿ ಜಾಗಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಪಟ್ಟಾ ಜಾಗದಲ್ಲಿ ಗಣಿಗುತ್ತಿಗೆ ನಿಯಮಗಳನ್ನು ಸರಳೀಕರಿಸಲಾಗಿದೆ. ಭೌಗೋಳಿಕವಾಗಿ ಬೇರೆ-ಬೇರೆಯಾಗಿದ್ದ ನಿಯಮಗಳನ್ನು ತೆಗೆದು “ಒಂದು ರಾಜ್ಯ-ಒಂದು ನಿಯಮ“ ಜಾರಿಗೆ ತಂದಿರುವುದು ಪ್ರಮುಖ ಬೆಳವಣಿಗೆ ಎಂದು ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಬಳಿಕ ಈ ಸಂದರ್ಭದಲ್ಲಿ ಮಾತನಾಡಿದ ಬಿ. ಉಮಾಶಂಕರ್, ಕಳೆದ 40 ವರ್ಷಗಳಿಂದ ಬಾಕಿ ಉಳಿದಿದ್ದ ಶೇ 80 ರಷ್ಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು, ಬಾಕಿ ಬೇಡಿಕೆಗಳಿಗಾಗಿ ಮುಂಬರುವ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು. ಇನ್ನು ಮಾಧ್ಯಮಗೋಷ್ಟಿಯಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ಉಪಾಧ್ಯಕ್ಷ ಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಜಶೇಖರ್, ಉದ್ಯಮ ವಲಯದ ಆಶಾ ಪ್ರಸನ್ನ ಕುಮಾರ್, ರಾಜೇಶ್, ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ: ಡಿಕೆಶಿ ಹೇಳಿದ್ದೇನು?

ABOUT THE AUTHOR

...view details