ಕರ್ನಾಟಕ

karnataka

ETV Bharat / state

ಸಿಎಂ ಬಗ್ಗೆ ಲಘುವಾಗಿ ಮಾತನಾಡಲ್ಲ... ಆದ್ರೆ ಗೌಡರು ಹೇಳಿದ್ರು ಅದೊಂದು ಮಾತು? - ದೇವೇಗೌಡರು

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಪ್ರವಾಹ ಹೆಚ್ಚಾಗಿದೆ. ಯಡಿಯೂರಪ್ಪ ಬೆಳೆಗಾವಿಗೆ ಭೇಟಿ ನೀಡಿದ್ದಾರೆ. ಕೆಲ ಭಾಗದಲ್ಲಿ ಅವರಿಗೂ ಹೋಗೋಕೆ ಆಗುತ್ತಿಲ್ಲ. ಎಷ್ಟು ಬೆಳೆ ನಾಶ ಆಗಿದೆ ಅಂತ ನೀರು ತಗ್ಗಿದ ಮೇಲೆ ಗೊತ್ತಾಗುತ್ತದೆ. ಬಿಎಸ್​​ವೈ ಕೆಲಸ ಮಾಡುತ್ತಿದ್ದಾರೆ. ನಾನು ಸಿಎಂ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.

ಗೋಲ್ ರೀಚ್ ಮಾಡಿದ ಯಡಿಯೂರಪ್ಪ : ದೇವೇಗೌಡರು

By

Published : Aug 8, 2019, 7:24 PM IST

ಬೆಂಗಳೂರು:ಬಿ.ಎಸ್. ಯಡಿಯೂರಪ್ಪನವರು ಒಂದು ವರ್ಷ ನಾಲ್ಕು ತಿಂಗಳು ಕಷ್ಟ ಪಟ್ಟು ತಮ್ಮ ಗೋಲ್ ರೀಚ್ ಮಾಡಿದ್ದಾರೆ. ನಾನು ಅವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪರೋಕ್ಷವಾಗಿಯೇ ಟಾಂಗ್​ ಕೊಟ್ಟಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಬೆಂಗಳೂರು ನಗರದ ಮಹಿಳಾ ಮುಖಂಡರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ರಾತ್ರಿಯೇ ಯಡಿಯೂರಪ್ಪ ಬೆಳಗಾವಿಗೆ ಹೋಗಿದ್ದಾರೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದರು.

ಗೋಲ್ ರೀಚ್ ಮಾಡಿದ ಯಡಿಯೂರಪ್ಪ : ದೇವೇಗೌಡರು

ನಾನೂ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪನವರೂ ಕೆಲಸ ಮಾಡುತ್ತಿದ್ದಾರೆ. ನಾನು ಸಿಎಂ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಸಚಿವ ಸಂಪುಟ ರಚನೆ ಮಾಡುವುದಕ್ಕೆ ಅವರಿಗೆ ಏನು ಕಷ್ಟ ಇದೆಯೋ?. ಆದರೆ, ಅವರ ಅಧ್ಯಕ್ಷರು ನೆರೆ ಬಗ್ಗೆ ಗಮನಿಸಿ ಅಂತ ಹೇಳಿರೋದಕ್ಕೆ ವಾಪಸ್ ಬಂದಿದ್ದಾರೆ. ಯಡಿಯೂರಪ್ಪ ಅವರು ಪಟ್ಟಿ ತೆಗೆದುಕೊಂಡು ಹೋಗಿರಬಹುದು. ಆದರೆ, ಕಾಶ್ಮೀರ ವಿಚಾರ, ಸುಷ್ಮಾ ನಿಧನದಿಂದ ಅವರಿಗೆ ವರಿಷ್ಠರಿಂದ ಕ್ಯಾಬಿನೆಟ್​ಗೆ ಅಪ್ರೂವ್ ಮಾಡೋಕೆ ಆಗದೇ ಇರಬಹುದು. ನಾನು ಯಡಿಯೂರಪ್ಪ ಅವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ನೆರೆ ನಿಂತ ಮೇಲೆ ಹಾನಿ ಗೊತ್ತಾಗುತ್ತೆ:

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಪ್ರವಾಹ ಹೆಚ್ಚಾಗಿದೆ. ಯಡಿಯೂರಪ್ಪ ಬೆಳೆಗಾವಿಗೆ ಹೋಗಿದ್ದಾರೆ. ಕೆಲ ಭಾಗದಲ್ಲಿ ಅವರಿಗೂ ಹೋಗೋಕೆ ಆಗುತ್ತಿಲ್ಲ. ಎಷ್ಟು ಬೆಳೆ ನಾಶ ಆಗಿದೆ ಅಂತ ನೀರು ತಗ್ಗಿದ ಮೇಲೆ ಗೊತ್ತಾಗುತ್ತದೆ ಎಂದರು. ಕುಮಾರಸ್ವಾಮಿ ಅವರಿಗೆ ಹುಷಾರಿಲ್ಲ. ಎರಡು ಮೂರು ದಿನದಲ್ಲಿ ಆರೋಗ್ಯ ಸರಿ ಹೋದರೆ ಇಬ್ಬರು ನೆರೆ ಪ್ರದೇಶಕ್ಕೆ ಭೇಟಿ ಕೊಡುತ್ತೇವೆ. ಇಲ್ಲದಿದ್ದರೆ, ನಾನೊಬ್ಬನೇ ಆ ಪ್ರದೇಶಕ್ಕೆ ಹೋಗುತ್ತೇನೆ. ಆದರೆ, ಏರಿಯಲ್ ಸರ್ವೆ ಮಾಡೋಕೆ ಆಗುವುದಿಲ್ಲ. ರೈಲು ಅಥವಾ ರಸ್ತೆ ಮೂಲಕ ನೆರೆ ಪ್ರದೇಶಕ್ಕೆ ಹೋಗಿ ಭೇಟಿ ನೀಡಿ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಕೊಡುತ್ತೇನೆ. ಬಳಿಕ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ದೋಸ್ತಿ ಬಗ್ಗೆ ಆಗಸ್ಟ್​ 10ರ ಬಳಿಕ ಮಾತನಾಡುತ್ತೇನೆ:

ದೋಸ್ತಿ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಆಗಸ್ಟ್ 10 ರಂದು ಕಾಂಗ್ರೆಸ್ ವರಿಷ್ಠರು ಬಂದು ಮಾತನಾಡುತ್ತೇನೆಂದು ಹೇಳಿರುವುದನ್ನು ಮಾಧ್ಯಮಗಳಲ್ಲಿ ಕೇಳಿದ್ದೇನೆ. ಅವರು ಬಂದ ನಂತರ ಮಾತುಕತೆ ಮಾಡಿ ನಿರ್ಧಾರ ಮಾಡುತ್ತೇವೆ. ಉಪ ಚುನಾವಣೆ ಕ್ಷೇತ್ರದ ಸ್ಪರ್ಧೆ ಬಗ್ಗೆಯೂ ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

ಮಹಿಳಾ ಕಾರ್ಯಧ್ಯಕ್ಷರ ನೇಮಕ :ರಾಜ್ಯಾಧ್ಯಕ್ಷ ಸ್ಥಾನ ಬೇಡವೆಂದು ಹಿರಿಯ ನಾಯಕಿ ಲೀಲಾದೇವಿ ಆರ್. ಪ್ರಸಾದ್ ಹೇಳಿದ್ದಾರೆ. ಹೀಗಾಗಿ 6 ಜನ ಮಹಿಳಾ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ತೀರ್ಮಾನ ಮಾಡಿದ್ದೇನೆ. ಅದರಲ್ಲಿ ಮುದ್ದೆಬಿಹಾಳದ ಮಂಗಳಾದೇವಿ ಎಂಬುವರನ್ನು ಕಾರ್ಯಾಧ್ಯಕ್ಷೆಯನ್ನಾಗಿ ಮಾಡಲಾಗಿದೆ. ಅದರ ಜೊತೆಗೆ ಇನ್ನೂ 5 ಜನ ಮಹಿಳಾ ಕಾರ್ಯಾಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಹೇಳಿದರು.

ಸಮಾವೇಶ :ಆಗಸ್ಟ್ 18 ರಂದು ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಿಳಾ ಮೀಸಲಾತಿ ಬಿಲ್ ಜಾರಿಗೆ ಬರಬೇಕು. ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಇದೆ. ರಾಜ್ಯಸಭೆಯಲ್ಲಿ ಈ ಬಿಲ್ ಪಾಸ್ ಆಗಿದೆ. ಮಹಿಳಾ ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರದಲ್ಲಿ ಮಹಿಳೆಯರಿಗೆ ಸ್ಥಾನ ನೀಡುವ ಯೋಚನೆ ಇದೆ. ಈ ಬಾರಿ ಮಹಿಳೆಯರಿಗೂ ಸೀಟು ಕೊಟ್ಟು ಪ್ರಯೋಗ ಮಾಡುವ ಆಲೋಚನೆ ಮಾಡಿದ್ದೇನೆ. ರಾಜ್ಯದಲ್ಲೂ ಮಹಿಳೆಯರು ನಿಲ್ಲುವ ಇಚ್ಚೆ ಇದ್ದರೆ ಕ್ಷೇತ್ರ ಗುರುತಿಸಿ ಕೆಲಸ ಪ್ರಾರಂಭ ಮಾಡಲಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 9 ಸ್ಥಾನ ಮಹಿಳೆಯರಿಗೆ ನೀಡುವ ಆಸೆ ಇದೆ ಎಂದು ಮಾಹಿತಿ ನೀಡಿದರು.

ಉಪ ಚುನಾವಣೆ 3 ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುತ್ತೇವೆ. ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಆ.13 ರಂದು ಸಭೆ ಮಾಡಿ ರಾಜ್ಯ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದರು.

ABOUT THE AUTHOR

...view details