ಮಾಜಿ ಸಚಿವ ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ದಾಖಲು - ರೋಷನ್ ಬೇಗ್ಗೆ ಮತ್ತೆ ಅನಾರೋಗ್ಯ'
09:30 November 26
ನಿನ್ನೆ ಸಿಬಿಐ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ರೋಷನ್ ಬೇಗ್ರನ್ನು ಮತ್ತೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಅಲ್ಲದೇ ಅವರನ್ನು 28ರ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಲಾಗಿತ್ತು.
ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ಸಚಿವ ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ನಿಂದ 400 ಕೋಟಿ ರೂಪಾಯಿ ಪಡೆದ ಆರೋಪದಲ್ಲಿ ರೋಷನ್ ಬೇಗ್ ಅವರನ್ನ ಸಿಬಿಐ ಅರೆಸ್ಟ್ ಮಾಡಿತ್ತು.
ಬೇಗ್ ಈಗಾಗಲೇ ಹಾರ್ಟ್ ಆಂಜಿಯೋಗ್ರಾಮ್ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಮೆಡಿಕಲ್ ಡಯೆಟ್ನಲ್ಲಿದ್ದು, ಬಿಪಿ ಶುಗರ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದೆ ರೋಷನ್ ಬೇಗ್ಗೆ ಒಮ್ಮೆ ಹಾರ್ಟ್ ಆಪರೇಷನ್ ಆಗಿರೋ ಹಿನ್ನೆಲೆ ವೈದ್ಯರ ಸಲಹೆಯಂತೆ ರೋಷನ್ ಬೇಗ್ ಅವರಿಗೆ ಜೈಲಿನಲ್ಲಿ ಮೆಡಿಕಲ್ ಡಯೆಟ್ ಮಾಡುವಂತೆ ಸೂಚಿಸಲಾಗಿತ್ತು.
ನಿನ್ನೆ ಮತ್ತೆ ಸಿಬಿಐ ಕಸ್ಟಡಿಗೆ ನೀಡಲಾಗಿದ್ದು, ಹೀಗಾಗಿ ಇಂದಿನಿಂದ ಸಿಬಿಐ ವಿಚಾರಣೆ ಮಾಡೋದು ಅನಿವಾರ್ಯವಾಗಿತ್ತು. ಆದರೆ, ಸದ್ಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆರೋಗ್ಯ ತಪಾಸಣೆ ಮುಗಿದ ಬಳಿಕ ರೋಷನ್ ಬೇಗ್ ವಿಚಾರಣೆ ಮುಂದುವರಿಯಲಿದೆ.