ಕರ್ನಾಟಕ

karnataka

ETV Bharat / state

ರಾಗಿಣಿ ಕೇಸ್ ಮುಚ್ಚಿ ಹಾಕೋಕೆ ಯಾರ ಒತ್ತಡ ಇದೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ರಾಗಿಣಿ ಕೇಸ್ ಮುಚ್ಚಿ ಹಾಕೋಕೆ ಯಾರ ಒತ್ತಡ ಇದೆ ಎಂಬುದನ್ನು ಬಹಿರಂಗಪಡಿಸಿ ಅಂತಾ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Former minister Priyank Kharge, Priyank Kharge talk about Ragini case,Former minister Priyank Kharge news, Former minister Priyank Kharge 2020 news, ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ, ರಾಗಿಣಿ ಪ್ರಕರಣದ ಬಗ್ಗೆ ಮಾತನಾಡಿದ ಪ್ರಿಯಾಂಕ್​ ಖರ್ಗೆ, ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಸುದ್ದಿ, ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ 2020 ಸುದ್ದಿ,
ರಾಗಿಣಿ ಕೇಸ್ ಮುಚ್ಚಿಹಾಕೋಕೆ ಯಾರ ಒತ್ತಡ ಇದೆ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

By

Published : Sep 5, 2020, 8:09 AM IST

ಬೆಂಗಳೂರು: ರಾಗಿಣಿ ಕೇಸ್ ಮುಚ್ಚಿಹಾಕೋಕೆ ಒತ್ತಡವಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಸಿ.ಟಿ.ರವಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಯಾರ ಒತ್ತಡ ಅನ್ನೋದನ್ನು ಬಹಿರಂಗಪಡಿಸಲಿ ಎಂದು ತಿರುಗೇಟು ನೀಡಿದರು.

ರಾಗಿಣಿ ಕೇಸ್ ಮುಚ್ಚಿ ಹಾಕೋಕೆ ಯಾರ ಒತ್ತಡ ಇದೆ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

ಅವರು ಹೇಳೋಕೆ ಆಗದಿದ್ದರೆ ಸಿಸಿಬಿ ಮುಂದೆ ಹೇಳಲಿ. ಯಾರ ಒತ್ತಡವಿದೆ ಅಂತ ಅಲ್ಲಿ ಹೇಳಲಿ. ಗೊತ್ತಿದ್ದೂ ಅದನ್ನ ಮುಚ್ಚಿಟ್ಟರೆ ಅದು ತಪ್ಪಾಗಲಿದೆ ಎಂದರು.

ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಕುಸಿತ...

ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಕುಸಿದಿದ್ದು, ಕಳೆದ ಆರು ತಿಂಗಳಿಂದ ಸರ್ಕಾರ ನೀಲನಕ್ಷೆ ತಯಾರಿಸಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಮಕ್ಕಳಿಗೆ ಹೇಗೆ ಪಾಠ ಮಾಡಬೇಕು. ಶಿಕ್ಷಕರಿಗೆ ಯಾವ ಸೂಚನೆ ಕೊಡಬೇಕು. ಇದರ ಬಗ್ಗೆ ಎಲ್ಲಿಯೂ ಸರ್ಕಾರ ಚಿಂತನೆ ನಡೆಸಿಲ್ಲ. ಖಾಸಗಿ ಶಾಲೆಯಲ್ಲಿ ಆನ್​ಲೈನ್ ಶಿಕ್ಷಣ ತಂದಿದ್ದಾರೆ. 80 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿದ್ದಾರೆ. 62.5%ರಷ್ಟು ಮಕ್ಕಳಿಗೆ ಸ್ಮಾರ್ಟ್ ಫೋನ್ ಇದೆ. ಲ್ಯಾಪ್​ಟಾಪ್ ಕೂಡ ಲಭ್ಯವಿದೆ. ಶೇ. 53.75%ರಷ್ಟು ಮಕ್ಕಳಿಗೆ ಇಂಟರ್​ನೆಟ್ ಸೌಲಭ್ಯವಿದೆ. ಆದರೆ ಉಳಿದ ಮಕ್ಕಳಿಗೆ ಯಾವ ಸೌಲಭ್ಯವೂ ಇಲ್ಲ. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಸೌಲಭ್ಯ ಶೂನ್ಯ. ಗ್ರಾಮೀಣ ಭಾಗದಲ್ಲಿ ಇಂಟರ್​ನೆಟ್ ಸೌಲಭ್ಯ ಸರಿಯಿಲ್ಲ. ರಾಜ್ಯದಲ್ಲಿ 49,883 ಸರ್ಕಾರಿ ಶಾಲೆಗಳಿವೆ. 7,377 ಅನುದಾನಿತ ಶಾಲೆಗಳಿವೆ. 18,760 ಖಾಸಗಿ ಶಾಲೆಗಳಿವೆ. ಪ್ರತಿ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊರತೆಯಿದೆ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಣ ವ್ಯವಸ್ಥೆ ಪಾತಾಳಕ್ಕೆ ಬಿದ್ದಿದೆ...

ಇಂದು ಶಿಕ್ಷಕರ ದಿನಾಚರಣೆ. ಆದರೆ ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಬಿದ್ದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ಲಕ್ಷಾಂತರ ಮಕ್ಕಳ ಬದುಕು ಬೀದಿಗೆ ಬಿದ್ದಿದೆ. ಕೊರೊನಾದಿಂದಾಗಿ‌ ಶೈಕ್ಷಣಿಕ ಕಾರ್ಯಚಟುವಟಿಕೆ ನಡೆಯುತ್ತಿಲ್ಲ. ಆನ್​ಲೈನ್ ಶಿಕ್ಷಣ ವ್ಯವಸ್ಥೆ ತಂದಿದ್ದಾರೆ. ಆದರೆ ಅದು ಹದಗೆಟ್ಟು ಹೋಗಿದೆ ಎಂದರು.

ABOUT THE AUTHOR

...view details