ಕರ್ನಾಟಕ

karnataka

ETV Bharat / state

ಲಾಲ್​ ಬಾಗ್ ಫಲಪುಷ್ಪ ಪ್ರದರ್ಶನ... ಈ ಬಾರಿ ನಡೆಯಲಿದೆ ಹೂಗಳ ಜಂಬೂ ಸವಾರಿ - ಫಲಪುಷ್ಪ ಪ್ರದರ್ಶನ

ಲಾಲ್​ ಬಾಗ್​ನಲ್ಲಿ ವರ್ಷದಲ್ಲಿ ಎರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯೇ ಹೂಗಳಿಂದ ಮಾಡಿದ ಕಲಾಕೃತಿಗಳು. ಈ ಬಾರಿ ಹೂವಿಗಳಿಂದ ಒಡೆಯರ್ ಅವರ ಜೀವನ ಚರಿತ್ರೆ ತೆರೆಯಲಿದ್ದು ಪ್ರವಾಸಿಗರು ಹೂದೋಟ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

ಲಾಲ್​ ಬಾಗ್​ನಲ್ಲಿ ನಡೆಯಲಿದೆ ಹೂಗಳ ಜಂಬೂ ಸವಾರಿ

By

Published : Jul 21, 2019, 5:08 PM IST

ಬೆಂಗಳೂರು :ಈ ಬಾರಿಯ ಸ್ವಾತಂತ್ರ್ಯ ದಿನದ ಅಂಗವಾಗಿ ಲಾಲ್​ ಬಾಗ್​ನಲ್ಲಿ ನಡೆಯುವ ಫಲಪುಷ್ಟ ಪ್ರದರ್ಶನದಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅನಾವರಣಗೊಳ್ಳಲಿದೆ.

ಲಾಲ್​ ಬಾಗ್, ಬೆಂಗಳೂರು

ವರ್ಷದಲ್ಲಿ ಎರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯೇ ಹೂಗಳಿಂದ ಮಾಡಿದ ಕಲಾಕೃತಿಗಳು. ಈ ಬಾರಿ ಹೂಗಳಿಂದ ಒಡೆಯರ್ ಅವರ ಜೀವನ ಚರಿತ್ರೆ ತೆರೆಯಲಿದ್ದು ಪ್ರವಾಸಿಗರು ಹೂದೋಟ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.

ಮೊದಲು ಫಲಪುಷ್ಟ ಪ್ರದರ್ಶನಕ್ಕೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಥೀಮ್​ ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಜಯಚಾಮರಾಜೇಂದ್ರ ಒಡೆಯರ್​ ಥೀಮ್ ನೊಂದಿಗೆ ಫಲಪುಷ್ಪ ಆಯೋಜಿಸಲು ತೀರ್ಮಾನ ಮಾಡಲಾಗಿದೆ.

ಒಡೆಯರ್ ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ, ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಈ ನಿರ್ಧಾರ ಮಾಡಿದೆ.

ಏನೇನಿರುತ್ತೆ ಫಲಪುಷ್ಟ ಪ್ರದರ್ಶನದಲ್ಲಿ

ಮೈಸೂರು ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂ ಸವಾರಿ, ಚಿನ್ನದ ಸಿಂಹಾಸನ, ಪುಷ್ಪಗಳ ಮೂಲಕ ಅನಾವರಣಗೊಳ್ಳಲಿದೆ. ಆಗಸ್ಟ್‌ 9 ರಿಂದ ಹತ್ತು ದಿನಗಳ ಕಾಲ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಪುಷ್ಪಲೋಕ ಅನಾವರಣಗೊಳ್ಳಲಿದೆ.

ABOUT THE AUTHOR

...view details