ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ಬೆಂಗಳೂರು ಮೆಟ್ರೋ ಒಂದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಗಮನಾರ್ಹ ಕೊಡುಗೆ ಕರ್ನಾಟಕಕ್ಕೆ ಬಂದಿಲ್ಲ ಎಂದು ಎಫ್ಕೆಸಿಸಿಐ ಕಚೇರಿಯಲ್ಲಿ ವಹಿವಾಟುಗಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ವಹಿವಾಟು ತಜ್ಞರ ಅಭಿಪ್ರಾಯ ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಾಲ್ ಎಂ ಸುಂದರ್ ಮಾತನಾಡಿ, ಇದೊಂದು ಸಾಮಾನ್ಯ ಬಜೆಟ್, ಸಾಮಾನ್ಯ ಜನರಿಗೆ ಈ ಬಜೆಟ್ನಿಂದ ಏನೂ ಪ್ರಯೋಜನ ಇಲ್ಲ. ಟೂರಿಸಂ ಸೇರಿ ಹೋಟೆಲ್ ಉದ್ಯಮದಲ್ಲಿ ಏನಾದ್ರೂ ಪ್ಯಾಕೇಜ್ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು.
ಬಜೆಟ್ನಲ್ಲಿ ದೇಶದ ಹಣಕಾಸು ವ್ಯವಸ್ಥೆ ಬ್ಯಾಲೆನ್ಸ್ ಮಾಡಲಾಗಿದೆ. ಎಜುಕೇಷನ್ ಪಾಲಿಸಿಯಲ್ಲಿ 15 ಸ್ಕೂಲ್ ಮಾಡುತ್ತಾರೆ ಎಂಬುದನ್ನು ಸ್ವಾಗತಿಸುತ್ತೇವೆ. ಆರ್ಥಿಕ ತಜ್ಞ ನಿತ್ಯಾನಂದ ಮಾತನಾಡಿ, ಬಜೆಟ್ನಲ್ಲಿ ಹೊಸ ಹೊರೆ ಇಲ್ಲ, ಹೊಸ ಬರೆ ಇಲ್ಲ.
ಯಾವುದೇ ನೂತನ ತೆರಿಗೆ ವಿಧಿಸಿ ಜನ ಸಾಮಾನ್ಯನಿಗೆ ಹೊರೆ ಇಲ್ಲವಾಗದಂತೆ ನೋಡಿಕೊಂಡಿರುವುದು ದೊಡ್ಡ ವಿಷಯ. ಮೆಟ್ರೋಗೆ ಅನುದಾನ ನೀಡಿರುವ ಹಿನ್ನೆಲೆ ಐಟಿ ವಲಯ ಅಭಿವೃದ್ಧಿ ಆಗಲಿದೆ ಎಂದರು.