ಬೆಂಗಳೂರು:ಸಾಲವನ್ನ ಮರುಪಾವತಿಸಿಲ್ಲವೆಂದು ರೊಚ್ಚಿಗೆದ್ದ ಯುವಕರಿಬ್ಬರು ಕಾರ್ ಶೋರೂಂಗೆ ಬೆಂಕಿ ಹಚ್ಚಿರುವ ಆರೋಪ ಪ್ರಕರಣ ತಿಲಕ್ನಗರದ ಬೈರಸಂದ್ರ ಬಳಿ ನಡೆದಿದೆ.
ಶೋ ರೂಂ ಮಾಲೀಕ ಮೊಹಮ್ಮದ್ ಅಜಾದ್ ಎಂಬುವರು ಆರೋಪಿಗಳಾದ ಅಮ್ರಾನ್ ಹಾಗೂ ಇರ್ಫಾನ್ ಬಳಿ 5 ಲಕ್ಷ ರೂ. ಹಣ ಪಡೆದಿದ್ದ ಹಿನ್ನೆಲೆ ಹಣ ವಾಪಸ್ ನೀಡುವಂತೆ ಸತಾಯಿಸುತ್ತಿದ್ರಂತೆ. ಆದಕ್ಕೆ ಮೊಹಮ್ಮದ್ ಅಜಾದ್ ಸಮಯಾವಾಕಾಶ ಕೇಳಿದ್ದರು. ಇದಕ್ಕೊಪ್ಪದ ಆರೋಪಿಗಳು ಇದೇ ತಿಂಗಳ 7ನೇ ತಾರೀಖು ಶೋರೂಂಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಕಿ ಹಚ್ಚಿದ ಪರಿಣಾಮ ಮಾರುತಿ ಬ್ರಿಜಾ, ಬ್ರಿಯೋ, ಇನೋವಾ ಸೇರಿದಂತೆ ಕೆಲ ಕಾರುಗಳು ಸುಟ್ಟು ಕರಕಲಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಬೆಲೆ ಬಾಳುವ ಕಾರುಗಳು ಬೆಂಕಿಗಾಹುತಿಯಾಗಿವೆ.