ಕರ್ನಾಟಕ

karnataka

ETV Bharat / state

'ಈ ಸಂಜೆ' ಕಚೇರಿಯಲ್ಲಿ ಅಗ್ನಿ ಅವಘಢ.. ಸ್ಥಳಕ್ಕೆ ಶಾಸಕ ಸುರೇಶ್ ಕುಮಾರ್ ಭೇಟಿ.. - ಬೆಂಗಳೂರಿನ ಈ ಸಂಜೆ ಕಚೇರಿಯಲ್ಲಿ ಅಗ್ನಿ ಅವಘಢ

ಸ್ಥಳಕ್ಕೆ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಅಗ್ನಿ ಶಾಮಕ ದಳದ ಕಮಿಷನರ್ ಶಿವಕುಮಾರ್ ಸಹ ಇದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ..

Fire in E sanje paper office
'ಈ ಸಂಜೆ' ಕಚೇರಿಯಲ್ಲಿ ಅಗ್ನಿ ಅವಘಢ

By

Published : Sep 19, 2021, 7:48 PM IST

ಬೆಂಗಳೂರು :ನಗರದ ರಾಜಕುಮಾರ್ ರಸ್ತೆಯಲ್ಲಿರುವ 'ಈ ಸಂಜೆ' ಕಚೇರಿಯಲ್ಲಿ ಅಗ್ನಿ ಅವಘಢ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ.

'ಈ ಸಂಜೆ' ಕಚೇರಿಯಲ್ಲಿ ಅಗ್ನಿ ಅವಘಢ

ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿವೆ. ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಆಗಮಿಸಿದ್ದು, ಪರಿಶೀಲಿಸಿದ್ದಾರೆ.

ಸ್ಥಳಕ್ಕೆ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಅಗ್ನಿ ಶಾಮಕ ದಳದ ಕಮಿಷನರ್ ಶಿವಕುಮಾರ್ ಸಹ ಇದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ABOUT THE AUTHOR

...view details