ಬೆಂಗಳೂರು: ಜಿಗಣಿಯ ಟ್ರೀವಿ ಫರ್ನಿಚರ್ ಕಾರ್ಪ್ ಪ್ರೈವೇಟ್ ಲಿಮಿಟೆಡ್ ಫರ್ನಿಚರ್ ಕಾರ್ಖಾನೆಯಲ್ಲಿ, ಮುಂಜಾನೆ 5.45ಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಸೆಕ್ಯೂರಿಟಿ ಬಿಟ್ಟರೆ ಬೇರ್ಯಾರೂ ಕಾರ್ಮಿಕರು ಕಾರ್ಖಾನೆಯಲ್ಲಿ ಇಲ್ಲದ ಕಾರಣ ಯಾವುದೇ ಜೀವ ಹಾಕಿ ಆಗಿಲ್ಲ ಎನ್ನಲಾಗ್ತಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಜಿಗಣಿಯ ಫರ್ನಿಚರ್ ಕಾರ್ಖಾನೆಯಲ್ಲಿ ಬೆಂಕಿ - furniture factory in Jighani of bengaluru
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಜಿಗಣಿ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸೆಕ್ಯೂರಿಟಿ ಬಿಟ್ಟರೆ ಬೇರ್ಯಾರೂ ಕಾರ್ಮಿಕರು ಕಾರ್ಖಾನೆಯಲ್ಲಿ ಇಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಜಿಗಣಿಯ ಫರ್ನಿಚರ್ ಕಾರ್ಖಾನೆಯಲ್ಲಿ ಬೆಂಕಿ
ಬೆಂಕಿ ಕೆನ್ನಾಲಿಗೆ ಕಾರ್ಖಾನೆಯ ಹೊರಕ್ಕೆ ಚಾಚಿತ್ತು. ಜಿಗಣಿ ಪೊಲೀಸರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಆನೇಕಲ್ ಅಗ್ನಿಶಾಮಕ ದಳದ ನಾಲ್ಕೂ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿವೆ. ಕಾರ್ಖಾನೆಯಲ್ಲಿನ ಕೋಟಿಗೂ ಅಧಿಕ ಬೆಲೆ ಬಾಳುವ ಫರ್ನಿಚರ್ ಸುಟ್ಟುಹೋಗಿದ್ದು, ಅಳಿದುಳಿದ ಸರಕುಗಳಿಗೆ ಕಾರ್ಖಾನೆ ತೃಪ್ತಿಪಟ್ಟುಕೊಂಡಿದೆ.
ಇದನ್ನೂ ಓದಿ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಮನೆ.. ಸಜೀವ ಸಮಾಧಿಯಾದ ಮಗು!