ಕರ್ನಾಟಕ

karnataka

ETV Bharat / state

ಕಂಟೈನ್ಮೆಂಟ್ ಪ್ರದೇಶದಲ್ಲಿ ಗಲಾಟೆ ಪ್ರಕರಣ; ಕಾರ್ಪೊರೇಟರ್ ಮೇಲೆ ಕೇಸು ದಾಖಲು

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾರ್ಪೊರೇಟರ್ ನಾಜಿಮಾ ಖಾನಮ್‌ ಮತ್ತು ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

FIR against corporator najima khanam
ಕಾರ್ಪೊರೇಟರ್ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು

By

Published : May 11, 2020, 10:07 AM IST

ಬೆಂಗಳೂರು:ಅನಗತ್ಯ ಓಡಾಡಿ ಪೊಲೀಸರ ಕರ್ತವ್ಯಕ್ಕೆ ತೊಂದರೆಪಡಿಸಿದ ಗಂಭೀರ ಪ್ರಕರಣದಡಿ ಕಾರ್ಪೊರೇಟರ್ ನಾಜಿಮಾ ಖಾನಮ್‌ ಮತ್ತು ಪ್ರತಿಭಟನಾಕಾರರ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (FIR)‌ ದಾಖಲಾಗಿದೆ.

ಬಿಬಿಎಂಪಿ ಕಾರ್ಪೊರೇಟರ್ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು

ಕೆ.ಆರ್.ಮಾರ್ಕೆಟ್ ವಾರ್ಡ್​​​ನ ಟಿಪ್ಪು ನಗರದಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡು ಬಂದು ಓರ್ವ ಸಾವನ್ನಪ್ಪಿದ್ದು ಪ್ರದೇಶವನ್ನು ಕಂಟೈನ್ಮೆಂಟ್ ಝೋನ್​ (ನಿರ್ಬಂಧಿತ ವಲಯ) ಆಗಿ ಘೋಷಣೆ ಮಾಡಲಾಗಿತ್ತು. ಆದ್ರೆ, ಟಿಪ್ಪು ನಗರದ ಕಾರ್ಪೊರೇಟರ್​ ನಾಜಿಮಾ ಶನಿವಾರ ರಾತ್ರಿ ಹೊರಗಡೆ ಓಡಾಡುತ್ತಿದ್ದರು. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ಸೀಲ್​​ಡೌನ್ ಇರುವ ಪ್ರದೇಶದಲ್ಲಿ ಯಾರೂ ಓಡಾಟ ನಡೆಸಬಾರದು ಎಂದು ಹೇಳಿದಾಗ ಕಾರ್ಪೊರೇಟರ್​, ನಾನು ಯಾರು ಗೊತ್ತಾ? ಈ ಏರಿಯಾ ಕಾರ್ಪೊರೇಟರ್​ ಎಂದು ಹೇಳಿ‌ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು.

ನಿನ್ನೆ ಪೊಲೀಸರ ವಿರುದ್ಧ ಸಾಮಾಜಿಕ‌ ಅಂತರ ಪಾಲಿಸದೆ ಪ್ರತಿಭಟನೆಯನ್ನೂ ಅವರು ನಡೆಸಿದ್ದರು. ಕೊರೊನಾ ಸೋಂಕು ಹಿನ್ನೆಲೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಇದನ್ನು ಲೆಕ್ಕಿಸದೆ ಕಾರ್ಪೊರೇಟರ್​ ಹಾಗೂ ಅವರ ಬೆಂಬಲಿಗರು ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಬಗ್ಗೆ ಇನ್ನಷ್ಟು ವಿವರ:
ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿನಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದ. ಹೀಗಾಗಿ ಬಿಬಿಎಂಪಿ ಆ ಏರಿಯಾವನ್ನು ಸೀಲ್​ಡೌನ್ ಮಾಡಿತ್ತು‌. ಹಾಗೆಯೇ ಕಾರ್ಪೊರೇಟರ್​ ಪತ್ನಿ ಕೊರೊನಾ ಸೋಂಕಿತನೊಬ್ಬನ ಜೊತೆ ಸಂಪರ್ಕದಲ್ಲಿದ್ದ ಕಾರಣ ಇಡೀ ಕಾರ್ಪೊರೇಟರ್​ ಕುಟುಂಬವನ್ನೇ ಕ್ವಾರಂಟೈನ್ ಮಾಡಲಾಗಿತ್ತು.

ABOUT THE AUTHOR

...view details