ಬೆಂಗಳೂರು:ಹಣಕಾಸಿನ ವಿಚಾರಕ್ಕೆ ನಡೆದಿದ್ದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದಲ್ಲಿ ನಡೆದಿದೆ. ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಫಿನಾನ್ಶಿಯರ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಹಣ ಕೇಳಿದ ಫಿನಾನ್ಶಿಯರ್ಗೆ ಚಾಕುವಿನಿಂದ ಇರಿದ.. ಕಾಸಿನ ಗಲಾಟೆ ಕೊಲೆಯಲ್ಲಿಅಂತ್ಯ! - halasuru police station
ಕೊಟ್ಟಿದ್ದ ಹಣ ಹಿಂದಿರುಗಿಸುವಂತೆ ಕೇಳಿದ ಫಿನಾನ್ಶಿಯರ್ಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಲ್ಲಿ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದ ಫಿನಾನ್ಶಿಯರ್ ಸಾವನ್ನಪ್ಪಿದ್ದಾನೆ.
ವಿನ್ಸೆಂಟ್ ಹತ ಫಿನಾನ್ಶಿಯರ್. ನಿನ್ನೆ ಬೆಂಗಳೂರಿನ ದೊಮ್ಮಲೂರಿನ ಕೆನರಾ ಬ್ಯಾಂಕ್ ಬಳಿ ಮಣಿ ಹಾಗೂ ವಿನ್ಸೆಂಟ್ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆ ತಾರಕಕ್ಕೇರಿ ವಿನ್ಸೆಂಟ್ಗೆ ಮಣಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಸ್ಥಳೀಯರು ಮಣಿಪಾಲ್ ಆಸ್ಪತ್ರೆಗೆ ವಿನ್ಸೆಂಟ್ನನ್ನ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಚಾಕು ಇರಿದ ಆರೋಪಿ ಮಣಿ ಫಿನಾನ್ಸ್ ನೋಡಿಕೊಳ್ಳುತ್ತಿದ್ದ ವಿನ್ಸೆಂಟ್ನಿಂದ ಹಣ ಪಡೆದಿದ್ದ. ಬಹಳ ದಿನದಿಂದ ಹಣ ಕೊಡದೇ ಸತಾಯಿಸುತ್ತಿದ್ದ ಕಾರಣ ವಿನ್ಸೆಂಟ್ ನಿನ್ನೆ ಮಣಿಯನ್ನ ಭೇಟಿಯಾಗಿದ್ದ. ಈ ವೇಳೆ ಹಣ ಹಿಂದಿರುಗಿಸುವಂತೆ ವಿನ್ಸೆಂಟ್ ಕೇಳಿದಾಗ ಜಗಳ ನಡೆದಿತ್ತು. ಸದ್ಯ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಣಿಗಾಗಿ ಶೋಧ ಮುಂದುವರೆದಿದೆ.