ಕರ್ನಾಟಕ

karnataka

ETV Bharat / state

ಶಾಸಕ ಸುಧಾಕರ್​​​​ ಜೊತೆ ಚರ್ಚಿಸಿ ಅಂತಿಮ ತೀರ್ಮಾನ: ಎಂಟಿಬಿ - kannadanews

ಶಾಸಕ ಡಾ. ಸುಧಾಕರ್​​ರೊಂದಿಗೆ ಚರ್ಚಿಸಿದ ನಂತರ ಅಂತಿಮ ತಿರ್ಮಾನ ತಿಳಿಸುವುದಾಗಿ ಶಾಸಕ ಎಂಟಿಬಿ ನಾಗರಾಜ್​ ತಿಳಿಸಿದ್ದಾರೆ.

ಶಾಸಕ ಸುಧಾಕರ್​ ಜೊತೆ ಚರ್ಚಿಸಿ ಅಂತಿಮ ತೀರ್ಮಾನ

By

Published : Jul 14, 2019, 11:33 AM IST

ಬೆಂಗಳೂರು: ಶಾಸಕ ಡಾ. ಸುಧಾಕರ್​ ಸಿಗುವವರೆಗೆ ಯಾವುದೇ ಅಂತಿಮ ತಿರ್ಮಾನವಿಲ್ಲವೆಂದು ಎಂ.ಟಿ.ಬಿ.ನಾಗರಾಜ್ ತಿಳಿಸಿದ್ರು. ನಾನೇನೋ ತಿರ್ಮಾನಿಸಿಕೊಂಡಿದ್ದೇನೆ. ಆದರೆ ಸುಧಾಕರ್​​ರೊಂದಿಗೆ ಚರ್ಚಿಸಿದ ನಂತರ ಅಂತಿಮ ತಿರ್ಮಾನ ತಿಳಿಸುವುದಾಗಿ ಶಾಸಕ ಎಂಟಿಬಿ ನಾಗರಾಜ್​ ಹೇಳಿದ್ರು. ಅಲ್ಲದೆ ನಾನು ಎಲ್ಲೂ ಹೋಗಲ್ಲ, ಬೆಂಗಳೂರಿನಲ್ಲೇ ಇರ್ತೀನಿ ಎಂದ್ರು.

ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದರು, ಅದನ್ನ ತಿಳಿಸಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವು ಸರಿಯಿಲ್ಲ. ಇದರ ಬಗ್ಗೆ ಚರ್ಚಿಸಿದ್ದೇನೆ. ಸ್ವ ಕ್ಷೇತ್ರದಲ್ಲಿ ದೇವಸ್ಥಾನದ ಕಾರ್ಯಕ್ರಮ ಇದೆ. ಅದನ್ನು ಮುಗಿಸಿಕೊಂಡು ಸುಧಾಕರ್ ಭೇಟಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಎಂಟಿಬಿ ತಿಳಿಸಿದ್ರು. ಸಿಎಂ ಸೇರಿದಂತೆ ಎಲ್ರೂ ಮನವೊಲಿಸುವ ಯತ್ನ ಮಾಡಿದ್ದಾರೆ. ಎರಡು ಗಂಟೆಗೆ ಸುಧಾಕರ್ ಭೇಟಿ ಮಾಡ್ತೀನಿ. ಸುಧಾಕರ್ ಮನವೊಲಿಸುವ ಕಾರ್ಯ ಮಾಡ್ತೀನಿ. ಸುಧಾಕರ್ ರಾಜೀನಾಮೆ ಹಿಂಪಡೆಯಲ್ಲ ಅಂದ್ರೆ ನಾಳೆಯೇ ನನ್ನ ಅಂತಿಮ ತೀರ್ಮಾನ ಪ್ರಕಟಿಸುವೆ ಎಂದ್ರು.

ಶಾಸಕ ಸುಧಾಕರ್​ ಜೊತೆ ಚರ್ಚಿಸಿ ಅಂತಿಮ ತೀರ್ಮಾನ: ಎಂಟಿಬಿ ನಾಗರಾಜ್​

ಸಾರ್ವಜನಿಕರಿಗೆ ಒಳ್ಳೆಯದಾಗ್ಲಿ ಅಂತ ರಾಜೀನಾಮೆ ತೀರ್ಮಾನ ಕೈಗೊಂಡಿದ್ದೇನೆ. ರಾಜೀನಾಮೆ ಬಗ್ಗೆ ಕಾರ್ಯಕರ್ತರ ಬಳಿ ಚರ್ಚಿಸುತ್ತೇನೆ. ರಾಜಕೀಯ ಸಾಕು, ನಿವೃತ್ತಿ ತೆಗೆದುಕೊಳ್ಳಬೇಕು ಅನ್ನಿಸ್ತಿದೆ. ಮತದಾರರು ರಾಜಕೀಯದಲ್ಲಿ ಇರಬೇಕು ಅಂತಿದ್ದಾರೆ. ಒಂದು ವೇಳೆ ನಿವೃತ್ತಿಯಾದರೆ ಎಂಟಿಬಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡುವುದಾಗಿ ನಾಗರಾಜ್​ ತಿಳಿಸಿದ್ರು.

For All Latest Updates

ABOUT THE AUTHOR

...view details