ಬೆಂಗಳೂರು : ಪಿಜಿಯಲ್ಲಿ ಯುವತಿಯರಿಬ್ಬರ ನಡುವೆ ಆರಂಭವಾದ ಗಲಾಟೆ ಇದೀಗ ಮೈಕೋ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಿಟಿಎಂ ಲೇಔಟ್ನಲ್ಲಿ ಜನವರಿ 10 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಶೀಲಾ ಎಂಬ ಕೇರಳ ಮೂಲದ ನನ್ನ ರೂಮ್ಮೇಟ್ ಆಕೆಯ ಸ್ನೇಹಿನ ಜೊತೆ ವಿಡಿಯೋ ಕರೆಯಲ್ಲಿ ಮಾತನಾಡುವಾಗ ನನ್ನನ್ನು ಅಸಭ್ಯವಾಗಿ ತೋರಿಸಿದ್ದಾಳೆ. ಇದನ್ನು ಪ್ರಶ್ನಿಸಿದಾಗ ನನ್ನ ಮೇಲೆಯೇ ಹಲ್ಲೆ ಮಾಡಿದ್ದಾಳೆ ಎಂದು ಸೃಷ್ಟಿ ಎಂಬಾಕೆ ಆರೋಪಿಸಿದ್ದಾರೆ.
ಕನ್ನಡ ಯುವತಿಯ ಆರೋಪವೇನು?:ವೈದ್ಯೆಯಾಗಿರುವ ಸೃಷ್ಟಿ ಬಿಟಿಎಂ ಲೇಔಟಿನ ಪಿಜಿ ಯೊಂದರಲ್ಲಿ ವಾಸವಿದ್ದು, ಅದೇ ಪಿಜಿಯಲ್ಲಿ ರೂಮ್ಮೇಟ್ ಆಗಿರುವ ಕೇರಳ ಮೂಲದ ಯುವತಿ ಅಶೀಲಾ ವಿರುದ್ಧ ದೂರು ನೀಡಿದ್ದಾಳೆ. 'ರಾತ್ರಿ ವೇಳೆಯಲ್ಲಿಯೂ ಫೋನ್ ಕರೆಯಲ್ಲಿ ನಿರತವಾಗುವ ಅಶೀಲಾಳಿಂದ ತನ್ನ ನಿದ್ರೆಗೆ ಭಂಗವಾಗುತ್ತಿತ್ತು. ನಿದ್ರಾವಸ್ಥೆಯಲ್ಲಿದ್ದ ನನ್ನನ್ನು ಆಕೆ ವಿಡಿಯೋ ಕರೆಯಲ್ಲಿ ಯಾರಿಗೋ ಅಸಭ್ಯವಾಗಿ ತೋರಿಸಿ ನಗುತ್ತಿದ್ದಳು. ಅದನ್ನು ಪ್ರಶ್ನಿಸಿದಾಗ, ಬಿಟಿಎಂ ಲೇಔಟ್ನಲ್ಲಿ ಕೇರಳದವರ ಸಂಖ್ಯೆ ಅಧಿಕವಾಗಿದೆ ಎಂದು ಧಮ್ಕಿ ಹಾಕಿದ್ದಾಳೆ' ಅಂತಾ ಸೃಷ್ಟಿ ಆರೋಪಿಸಿದ್ದಾಳೆ. ಮಾತ್ರವಲ್ಲದೇ, ಕನ್ನಡ ಮಾತನಾಡಬೇಡ, ಕನ್ನಡಿಗರು ಕೌಶಲ್ಯತೆಯಿಲ್ಲದವರು ಎಂದು ಅವಾಚ್ಯವಾಗಿ ಮಾತನಾಡುವ ಮೂಲಕ ಭಾಷೆಯನ್ನು, ಕನ್ನಡಿಗರನ್ನು ನಿಂದಿಸಲಾಗಿದೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಸೃಷ್ಟಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ:ಎಂಜಿನಿಯರಿಂಗ್ ಕಾಲೇಜು ಪ್ರತಿನಿಧಿಗಳ ಚುನಾವಣೆ: ಹಾಸನದಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ