ಕರ್ನಾಟಕ

karnataka

ETV Bharat / state

ಎಫ್​ಡಿಎ ಪರೀಕ್ಷೆ: 1,112 ಹುದ್ದೆಗೆ ಪರೀಕ್ಷೆ ಬರೆಯಲಿರುವ 3.74 ಲಕ್ಷ ಅಭ್ಯರ್ಥಿಗಳು

ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಲಿಖಿತ ಪರೀಕ್ಷೆ ಜನವರಿ 24ರಂದು ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಕೆಪಿಎಸ್​​ಸಿ ಜಾಲತಾಣ www.kpsc.kar.nic.in ಗೆ ಭೇಟಿ ನೀಡಿ ಪ್ರವೇಶ ಪತ್ರ ಪಡೆದುಕೊಳ್ಳಬದಾಗಿದೆ.

FDA Examination
ಎಫ್​ಡಿಎ ಪರೀಕ್ಷೆ

By

Published : Jan 20, 2021, 8:24 PM IST

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 1,112 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಲಿಖಿತ ಪರೀಕ್ಷೆ ಜನವರಿ 24ರಂದು ನಡೆಯಲಿದೆ. ರಾಜ್ಯಾದ್ಯಂತ ಒಟ್ಟು 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ 137, ಉಳಿದ 975 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ 2020 ಜನವರಿ 31ರಂದು ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗಾಗಿ ರಾಜ್ಯದಲ್ಲಿ ಒಟ್ಟು 3 ,74,124 ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ಓದಿ:ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್‌ ನಾಯಕರ ಸಾಂಘಿಕ ಶಕ್ತಿ.. 'ಕೈ'ಗೊಂದಿಷ್ಟು ಕಸುವು, ಹೊಸ ಹುರುಪು..

ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು. ಕೆಪಿಎಸ್​​ಸಿ ಜಾಲತಾಣ www.kpsc.kar.nic.inಗೆ ಭೇಟಿ ನೀಡಿ ಪಡೆದುಕೊಳ್ಳಬದಾಗಿದೆ.

ABOUT THE AUTHOR

...view details