ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಸಿಸಿಬಿ ಕಚೇರಿಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಭೇಟಿ ಕೊಟ್ಟು ಕೊಂಚ ಹೊತ್ತು ಸಂಜನಾ ಅವರನ್ನ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಇದೇ ವೇಳೆ ತನಿಖೆಯ ಪ್ರಗತಿಯನ್ನು ಕಮಿಷನರ್ ಕಮಲ್ ಪಂತ್ ಅವರಿಗೆ ನೀಡಲು ತೆರಳಿದ್ದಾರೆ.
ವಿರೇನ್ ಕಳ್ಳ-ಪೊಲೀಸ್ ಆಟ... ಖನ್ನಾ ಮನೆಯಲ್ಲಿ ನಕಲಿ ಪೊಲೀಸ್ ಸಮವಸ್ತ್ರ ಪತ್ತೆ!
ವಿರೇನ್ ಖನ್ನಾ ಮನೆ ಮೇಲೆ ದಾಳಿ ಮಾಡಿದಾಗ ಕರ್ನಾಟಕ ಪೊಲೀಸ್ ಇಲಾಖೆಯ ನಕಲಿ ಸಮವಸ್ತ್ರ ಸಿಕ್ಕಿದೆ. ಯಾವ ಕಾರಣಕ್ಕೆ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಇತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಯಾವುದೇ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ತನಿಖೆ ಮುಗಿದ ನಂತರ ಎಲ್ಲದರ ಮಾಹಿತಿ ತಿಳಿಸುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಂದೀಪ್ ಪಾಟೀಲ್, ಇಂದು ಬೆಳಗ್ಗೆ ನ್ಯಾಯಾಲಯದ ಅನುಮತಿ ಪಡೆದು ಸ್ಯಾಂಡಲ್ವುಡ್ನಲ್ಲಿನ ಡ್ರಗ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಎರಡು ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ಸಂಜನಾ ಮನೆ ಹಾಗೂ ಈಗಾಗಲೇ ಬಂಧಿಸಿರುವ ಪಾರ್ಟಿ ಆಯೋಜಕ ವಿರೇನ್ ಖನ್ನಾ ಮನೆ ಮೇಲೆ ದಾಳಿ ನಡೆಸಿ ಸಾಕಷ್ಟು ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ. ಸಂಜನಾರನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದರು.
ಇದಲ್ಲದೆ ಪ್ರಮುಖವಾಗಿ ವಿರೇನ್ ಖನ್ನಾ ಮನೆ ಮೇಲೆ ದಾಳಿ ಮಾಡಿದಾಗ ಕರ್ನಾಟಕ ಪೊಲೀಸ್ ಇಲಾಖೆಯ ನಕಲಿ ಸಮವಸ್ತ್ರ ಸಿಕ್ಕಿದ್ದು, ಈ ಸಮವಸ್ತ್ರದ ಮೇಲೆ ಯಾವುದೇ ಸ್ಟಾರ್ ಇಲ್ಲ. ಯಾವ ಕಾರಣಕ್ಕೆ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಇತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ತನಿಖೆ ಮುಗಿದ ನಂತರ ಎಲ್ಲದರ ಮಾಹಿತಿ ತಿಳಿಸುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.