ಕರ್ನಾಟಕ

karnataka

By

Published : Dec 25, 2020, 4:11 PM IST

ETV Bharat / state

ನಾನು ಬಿಬಿಎಂಪಿ ಕಡೆಯವನು, ಫೈನ್ ಹಾಕ್ತೇನೆ ಎಂದು ತಿರುಗಾಡುತ್ತಿದ್ದ ನಕಲಿ ಮಾರ್ಷಲ್​​

ಲಾಲ್​​ಬಾಗ್ ಬಳಿಯ ಸಿದ್ಧಾಪುರದ ನಿವಾಸಿ ಕಿರಣ್ ಎಂಬಾತ ಜಯನಗರದ ಮೊದಲನೇ ಹಂತದಲ್ಲಿ ನಕಲಿ ವಾಕಿಟಾಕಿ ಹಿಡಿದು, ತಾನು ಬಿಬಿಎಂಪಿಯವನು ಎಂದು ಓಡಾಡುತ್ತಿದ್ದ. ಕೈಯಲ್ಲಿ ಬಿಬಿಎಂಪಿ ಎಂದು ಬರೆದಿರುವ ಫೈಲ್ ಹಿಡಿದು, ಜನರನ್ನು ತಡೆದು ನಿಲ್ಲಿಸಿ ಮಾಸ್ಕ್ ಹಾಕದಿದ್ದರೆ ಫೈನ್ ಹಾಕುತ್ತೇನೆ ಎನ್ನುತ್ತಿದ್ದ.

fake-bbmp-marshall-arrested-in-bengaluru
ಫೈನ್ ಹಾಕ್ತೇನೆ ಎಂದು ತಿರುಗಾಡುತ್ತಿದ್ದ ನಕಲಿ ಮಾರ್ಷಲ್ ಸೆರೆ

ಬೆಂಗಳೂರು: ನಾನು ಬಿಬಿಎಂಪಿ ಕಡೆಯವನು, ಮಾಸ್ಕ್ ಹಾಕದಿದ್ದರೆ ಫೈನ್ ಹಾಕುತ್ತೇನೆ ಎನ್ನುತ್ತಿದ್ದ ನಕಲಿ ಮಾರ್ಷಲ್​ವೊಬ್ಬನನ್ನು ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಡೆದಿದೆ.

ಫೈನ್ ಹಾಕ್ತೇನೆ ಎಂದು ತಿರುಗಾಡುತ್ತಿದ್ದ ನಕಲಿ ಮಾರ್ಷಲ್ ಸೆರೆ

ಲಾಲ್​​ಬಾಗ್ ಬಳಿಯ ಸಿದ್ಧಾಪುರದ ನಿವಾಸಿ ಕಿರಣ್ ಎಂಬಾತ ಜಯನಗರದ ಮೊದಲನೇ ಹಂತದಲ್ಲಿ ನಕಲಿ ವಾಕಿಟಾಕಿ ಹಿಡಿದು, ತಾನು ಬಿಬಿಎಂಪಿಯವನು ಎಂದು ಓಡಾಡುತ್ತಿದ್ದ. ಕೈಯಲ್ಲಿ ಬಿಬಿಎಂಪಿ ಎಂದು ಬರೆದಿರುವ ಫೈಲ್ ಹಿಡಿದು, ಜನರನ್ನು ತಡೆದು ನಿಲ್ಲಿಸಿ ಮಾಸ್ಕ್ ಹಾಕದಿದ್ದರೆ ಫೈನ್ ಹಾಕುತ್ತೇನೆ ಎನ್ನುತ್ತಿದ್ದ. ಈ ವೇಳೆ ತಿಲಕ್ ನಗರ ಪೊಲೀಸರು ಹಾಗೂ ಜಯನಗರದ 169 ವಾರ್ಡ್ ಮಾರ್ಷಲ್ಸ್ ತಂಡ, ಈತನನ್ನು ಠಾಣೆಗೆ ಒಪ್ಪಿಸಿ ಎಫ್​​ಐಆರ್ ದಾಖಲಿಸಿದ್ದಾರೆ‌.

ಓದಿ: ಮೋದಿ ಪ್ರಧಾನಿಯಾಗಿ ಇರೋತನಕ ಯಾವುದೇ ಕಂಪನಿ ರೈತರ ಭೂಮಿ ಕಿತ್ತುಕೊಳ್ಳೋಕೆ ಸಾಧ್ಯವೇ ಇಲ್ಲ: ಅಮಿತ್ ಶಾ

ವಿಚಾರಣೆ ವೇಳೆ ಬಡತನದಿಂದಾಗಿ ಹೀಗೆ ಮಾಡಿದ್ದೇನೆ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಪಾಲಿಕೆ ಕೆಲಸಗಾರ ರಂಗಣ್ಣ ಹೀಗೆ ಮಾಡಲು ಹೇಳಿದ್ದಾರೆ ಎಂದಿದ್ದಾನೆ. ಆದರೆ ರಂಗಣ್ಣ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಬಳಿಕ ಯುವಕನಿಂದ ತಪ್ಪು ಒಪ್ಪಿಗೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details