ಬೆಂಗಳೂರು: ನಗರದಲ್ಲಿ ಹಾಡಹಗಲೇ ಲಾಂಗ್ ತೋರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಡಹಗಲೇ ಲಾಂಗ್ ತೋರಿಸಿ ಸುಲಿಗೆ: ಆರೋಪಿ ಅಂದರ್
ಲಾಂಗ್ ತೋರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಅರ್ಫಾಜ್ ಬಂಧಿತ ಆರೋಪಿಯಾಗಿದ್ದು, ಸಿಸಿಟಿವಿ ಆಧರಿಸಿ ಈತನನ್ನು ಹೆಡೆಮುರಿ ಕಟ್ಟಿದ್ದಾರೆ.
ಅರ್ಫಾಜ್ ಬಂಧಿತ ಆರೋಪಿ. ಈತ ಕಳೆದ ಅ.22 ರಂದು ಹಾಡಹಗಲೇ ಲಾಂಗ್ ತೋರಿಸಿ ಕಾಚರಾಯಕನಹಳ್ಳಿಯ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್ ಮಾಲೀಕ ಶರತ್ ಹಾಗೂ ಅಲ್ಲೇ ನಿಂತಿದ್ದ ಗ್ರಾಹಕರಿಗೆ ಬೆದರಿಸಿದ್ದ. ಅಷ್ಟು ಮಾತ್ರವಲ್ಲದೆ ಲಾಂಗ್ ತೋರಿಸಿ 4,500 ರೂ. ಹಣ ಕಿತ್ತುಕೊಂಡಿದ್ದ. ಇದರಿಂದ ಸ್ಥಳೀಯರು ಭಯಭೀತರಾಗಿದ್ದರು. ಲಾಂಗ್ ತೋರಿಸಿ ಸುಲಿಗೆ ಮಾಡಿದ್ದ ದುಷ್ಕರ್ಮಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅರ್ಫಾಜ್ ಪೂರ್ವ ವಿಭಾಗ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಮೈ ಬಗ್ಗಿ ಕೆಲಸ ಮಾಡದೇ ಕಳ್ಳತನ, ಡಕಾಯಿತಿ ಮಾಡುತ್ತಿದ್ದ. ಈತ ಈ ಹಿಂದೆ ಕೆ ಜಿ ಹಳ್ಳಿ ಹಾಗೂ ಮಡಿವಾಳ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ತದ ನಂತರ ಬಿಡುಗಡೆ ಆದರೂ ಬುದ್ಧಿ ಕಲಿಯದೆ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ ಎನ್ನಲಾಗ್ತಿದೆ. ಅಲ್ಲದೇ ಈತ ಮಾದಕ ವ್ಯಸನಿ ಕೂಡ ಆಗಿದ್ದು, ತನಿಖೆ ಮುಂದುವರೆದಿದೆ.