ಬೆಂಗಳೂರು:ನಟ ದುನಿಯಾ ವಿಜಯ್ ನಿರ್ದೇಶಿಸಿರುವ ಸಲಗ ಸಿನಿಮಾ ಮೇಕಿಂಗ್ ಅನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವೀಕ್ಷಿಸಿ ಫುಲ್ ತ್ರಿಲ್ ಆಗಿದ್ದಾರೆ.
'ಸಲಗ' ಮೇಕಿಂಗ್ ವಿಡಿಯೋ ವೀಕ್ಷಿಸಿ ತ್ರಿಲ್ ಆದ ಸಿದ್ದರಾಮಯ್ಯ... - ಮಾಜಿ ಸಿಎಂ ಸಿದ್ದು ಫುಲ್ ತ್ರಿಲ್ ಆಗಿ ಸಲಗ ಮೇಕಿಂಗ್ ನೋಡಿದ್ದಾರೆ
ಸಲಗ ಸಿನಿಮಾದ ಮೇಕಿಂಗ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಸದ್ದು ಮಾಡ್ತಿದೆ. ಇದನ್ನು ವೀಕ್ಷಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಫುಲ್ ತ್ರಿಲ್ ಆಗಿದ್ದಾರೆ.
ಸಲಗ ಸಿನಿಮಾದ ಮೇಕಿಂಗ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದೇ ಖುಷಿಯಲ್ಲಿರೋ ದುನಿಯಾ ವಿಜಯ್ ಹಾಗೂ ನಿರ್ಮಾಪಕ ಕೆ.ಪಿ, ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಲು ಹೋಗಿದ್ದರು. ಈ ವೇಳೆ ಸ್ವತಃ ಸಿದ್ದರಾಮಯ್ಯ ಅವರೇ ಸಲಗ ಸಿನಿಮಾ ಶೂಟಿಂಗ್ ಮುಗಿಯಿತಾ ಎಂದು ಕೇಳಿದರಂತೆ. ಇದರಿಂದ ಖುಷಿಯಾದ ದುನಿಯಾ ವಿಜಯ್ ಸಲಗ ಸಿನಿಮಾದ ಮೇಕಿಂಗ್ ವಿಡಿಯೋ ತೋರಿಸಿದ್ದಾರೆ. ಈ ಚಿತ್ರದ ಮೇಕಿಂಗ್ ವಿಡಿಯೋ ನೋಡಿ ಸಿದ್ದರಾಮಯ್ಯ ಇದು ಆ್ಯಕ್ಷನ್ ಸಿನಿಮಾನಾ ಎಂದು ಕೇಳಿದ್ದಾರೆ. ನಂತರ ಸಿನಿಮಾ ಕ್ವಾಲಿಟಿ ಬಗ್ಗೆ ಮಾತನಾಡಿದ್ದಾರೆ.
ಚಿತ್ರದಲ್ಲಿ ಡಾಲಿ ಧನಂಜಯ್, ಕಾಕ್ರೋಚ್ ಖ್ಯಾತಿಯ ಸುಧೀಂದ್ರ ಸೇರಿದಂತೆ ಬಹು ದೊಡ್ಡ ಕಲಾವಿದರ ದಂಡೇ ಸಲಗದ ಜೊತೆಯಿದೆ. ಇನ್ನು ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿದೆ. ಜೊತೆಗೆ ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಪಿ. ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೊಸ ವರ್ಷಕ್ಕೆ ಸಲಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
TAGGED:
ಸಲಗ ಮೇಕಿಂಗ್ ನೋಡಿದ ಸಿದ್ದು