ಕರ್ನಾಟಕ

karnataka

ETV Bharat / state

ಮುಂದುವರೆದ ದೊಡ್ಡ ಗೌಡರ ಟೆಂಪಲ್​ ರನ್​... ಈ ಸಾರಿ ಪ್ರಯಾಣ ಎಲ್ಲಿಗೆ? - Tamil Nadu

ಪೂಜೆ, ಹೋಮ-ಹವನ ಅಂತ ಓಡಾಡುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಇಂದು ತಮಿಳುನಾಡಿಗೆ ಭೇಟಿ ನೀಡಿದೆ.

ಸಂಗ್ರಹ ಚಿತ್ರ

By

Published : May 20, 2019, 1:04 PM IST

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಕುಟುಂಬದೊಂದಿಗೆ ಇಂದು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದಾರೆ.

ಮೊದಲಿಗೆ ತಮಿಳುನಾಡಿನ ತಿರುವರೂರು ಜಿಲ್ಲೆಯ ರಾಜಗೋಪಾಲಸ್ವಾಮಿ ಮತ್ತು ಭಾಸ್ಕರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ಶ್ರೀರಂಗಂಗೆ ತೆರಳಿ ರಂಗನಾಥಸ್ವಾಮಿ ದರ್ಶನ ಪಡೆಯಲಿದ್ದಾರೆ. ಕಳೆದ ವಾರವಷ್ಟೇ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದಿದ್ದ ಗೌಡರು, ಮೊನ್ನೆ ಹುಟ್ಟು ಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದರು.

ಇದೀಗ ಮತ್ತೆ ತಮ್ಮ ಟೆಂಪಲ್​ ರನ್​ ಮುಂದುವರೆಸಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ದೇವೇಗೌಡರು ತೆರಳಿದ್ದು, ಜೊತೆಯಲ್ಲಿ ಪತ್ನಿ ಚೆನ್ನಮ್ಮ ಹಾಗೂ ಪುತ್ರ, ಸಚಿವ ಹೆಚ್.ಡಿ. ರೇವಣ್ಣ ಸಹ ತಮಿಳುನಾಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details