ಕರ್ನಾಟಕ

karnataka

By

Published : May 16, 2021, 3:05 AM IST

ETV Bharat / state

24 ಗಂಟೆಯೊಳಗೆ RTPCR ಫಲಿತಾಂಶ ನೀಡದ ಖಾಸಗಿ ಲ್ಯಾಬ್​ಗಳ ವಿರುದ್ಧ ಶಿಸ್ತು ಕ್ರಮ

ಕೋವಿಡ್ ಟೆಸ್ಟ್ ಪರೀಕ್ಷಾ ಫಲಿತಾಂಶ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಅನೇಕರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಆಗದೆ ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಪರ ಮುಖ್ಯ ಕಾರ್ಯದರ್ಶಿ ಆರ್​ಟಿಪಿಸಿಆರ್​ ಟೆಸ್ಟ್ ‌24 ಗಂಟೆಯೊಳಗೆ‌ ನೀಡುವಂತೆ ಖಾಸಗಿ ಲ್ಯಾಬ್‌ಗಳಿಗೆ ಆದೇಶ ಹೊರಡಿಸಿದ್ದಾರೆ.

RTPCR
RTPCR

ಬೆಂಗಳೂರು:ಎರಡನೇ ಅಲೆಯ ಕೊರೊನಾ‌ ತೀವ್ರತೆ ಹೆಚ್ಚಾಗುತ್ತಿದ್ದು, ಸ್ವಾಬ್ ಟೆಸ್ಟ್‌ಗೆ ಒಳಗಾಗುವವರ ಫಲಿತಾಂಶ ಬೇಗ ನೀಡಬೇಕಾಗುತ್ತೆ. ಕೋವಿಡ್ ಪಾಸಿಟಿವ್ ಬಂದಲ್ಲಿ ಅತೀ ಶೀಘ್ರವಾಗಿ‌ ಚಿಕಿತ್ಸೆ ಪಡೆಯಬಹುದಾಗಿದೆ.

ಆದರೆ, ಕೋವಿಡ್ ಟೆಸ್ಟ್ ಪರೀಕ್ಷಾ ಫಲಿತಾಂಶ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಅನೇಕರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಆಗದೆ ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಪರ ಮುಖ್ಯ ಕಾರ್ಯದರ್ಶಿ ಆರ್​ಟಿಪಿಸಿಆರ್​ ಟೆಸ್ಟ್ ‌24 ಗಂಟೆಯೊಳಗೆ‌ ನೀಡುವಂತೆ ಖಾಸಗಿ ಲ್ಯಾಬ್‌ಗಳಿಗೆ ಆದೇಶ ಹೊರಡಿಸಿದ್ದಾರೆ.

24 ಗಂಟೆಯೊಳಗೆ ಟೆಸ್ಟ್ ಫಲಿತಾಂಶ ಕೊಡದ ಲ್ಯಾಬ್​ಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳವುದಾಗಿ ಎಚ್ಚರಿಕೆ ನೀಡಿದ್ದಾರೆ. ಪರೀಕ್ಷೆ ಫಲಿತಾಂಶ ಬಂದ ಕೂಡಲೇ ಐಸಿಎಂಆರ್​ ಪೋರ್ಟಲ್​​ನಲ್ಲಿ ದಾಖಲಿಸಬೇಕು. ಇದನ್ನ ಉಲ್ಲಂಘಿಸುವ ಲ್ಯಾಬ್​ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details