ಬೆಂಗಳೂರು: ಟೆಕ್ನಾಲಜಿ ಯುಗದಲ್ಲಿ ಎಲ್ಲರೂ ಬಹುತೇಕವಾಗಿ ಆನ್ಲೈನ್ ಮೂಲಕ ವಹಿವಾಟು ನಡೆಸುತ್ತಾರೆ. ಹೀಗಾಗಿ ಅಂತರ್ಜಾಲ ಬಳಕೆದಾರರು ಜಾಸ್ತಿಯಾಗುತ್ತಿದ್ದಾರೆ. ಇನ್ನು ಸೈಬರ್ ಹ್ಯಾಕರ್ಗಳಿಗೆ ಶಿಕ್ಷಣವಂತರೇ ಟಾರ್ಗೆಟ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ಅವರು ಸೈಬರ್ ಅಪರಾಧದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಶಿಕ್ಷಿತರೇ ಸೈಬರ್ ಹ್ಯಾಕರ್ಗಳ ಟಾರ್ಗೆಟ್: ಹೇಮಂತ್ ನಿಂಬಾಳ್ಕರ್ ಹೇಳಿದ ಸತ್ಯ - ಬೆಂಗಳೂರು
ಸೈಬರ್ ಹ್ಯಾಕರ್ಗಳಿಗೆ ಶಿಕ್ಷಣವಂತರೇ ಟಾರ್ಗೆಟ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಸೈಬರ್ ಅಪರಾಧದ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ.
ರಾಜ್ಯದ ಸಿಐಡಿ ಘಟಕದಲ್ಲಿ ಕಾರ್ಯ ನಿರ್ವಹಣೆ ಮಾಡಿ ಬಹಳಷ್ಟು ಸೈಬರ್ ಅಪರಾಧಗಳನ್ನ ಪತ್ತೆ ಮಾಡಿರುವ ಹೇಮಂತ್ ನಿಂಬಾಳ್ಕರ್ ಅವರ ಅನುಭವದ ಪ್ರಕಾರ ಸದ್ಯ ಹೆಚ್ಚು ಸೈಬರ್ ಅಪರಾಧಕ್ಕೆ ಟಾರ್ಗೆಟ್ ಆಗ್ತಿರೋದು ವಿದ್ಯಾವಂತರು. ಬಹುತೇಕ ವಿದ್ಯಾರ್ಥಿಗಳು, ಉದ್ಯಮಿಗಳು ಆನ್ಲೈನ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿರುತ್ತಾರೆ. ಇದನ್ನು ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಅಂತವರನ್ನು ಟಾರ್ಗೆಟ್ ಮಾಡಿ ಹಣ ಲಪಾಟಾಯಿಸ್ತಾರೆ.
ಬ್ಯಾಂಕ್ಗೆೆ ಸಂಬಂಧಿಸಿದ ವಹಿವಾಟು:ಗೂಗಲ್ ಪೇ, ಎಟಿಎಂ ಕಾರ್ಡ್ , ಫೋನ್ ಪೇ, ಪೇಟಿಎಂನಂತಹ ಆ್ಯಪ್ ಮೂಲಕ ಅನೇಕ ಬ್ಯಾಂಕ್ ಸಂಬಂಧಿತ ವ್ಯವಹಾರವನ್ನು ಮಾಡುತ್ತೇವೆ. ಸೈಬರ್ ಖದೀಮರು ಇದನ್ನ ಬಂಡವಾಳವಾಗಿಟ್ಟುಕೊಂಡು ಬ್ಯಾಂಕ್ ಸಿಬ್ಬಂದಿಗಳಂತೆ ಕರೆ ಮಾಡಿ ಹಣವನ್ನ ಲೂಟಿ ಮಾಡುತ್ತಾರೆ.
ಇಮೇಲ್ ಹ್ಯಾಕ್:ಪ್ರತಿಯೊಬ್ಬರು ಕೂಡ ಇಮೇಲ್ ಅಕೌಂಟನ್ನು ಹೊಂದಿರುತ್ತಾರೆ. ತಮಗೆ ಬೇಕಾದ ಬ್ಯುಸಿನೆಸ್ ವಹಿವಾಟು, ಉದ್ಯೋಗ ಹುಡುಕುವಾಗ, ರೆಸ್ಯೂಮ್ ಅಟ್ಯಾಚ್ ಮಾಡಲು ಇ-ಮೇಲ್ ಐಡಿ ಅತಿ ಹೆಚ್ಚಾಗಿ ಬಳಕೆ ಮಾಡ್ತಾರೆ. ಆದರೆ, ಸೈಬರ್ ಖದೀಮರು ನಕಲಿ ಇಮೇಲ್ ಐಡಿ ಸೃಷ್ಟಿ ಮಾಡಿ ಉದ್ಯೋಗಾವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಬಹಳಷ್ಟು ಪ್ರಕರಣ ನಡೆದಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್: ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋ ಅಪ್ಲೋಡ್ ಮಾಡಿದನ್ನುಸೈಬರ್ ಖದೀಮರು ದುರ್ಬಳಕೆ ಮಾಡ್ತಾರೆ.
ಸೈಬರ್ ಅಪರಾಧವನ್ನ ಪತ್ತೆ ಹಚ್ಚಲು ಸರ್ಕಾರ ಬಹಳಷ್ಟು ಪ್ರಯತ್ನ ಮಾಡ್ತಿದೆ. ಜನ ಸೈಬರ್‌ನಿಂದ ಎಚ್ಚೆತ್ತುಕೊಳ್ಳಬೇಕು ಎಂದು ಹೇಮಂತ್ ನಿಂಬಾಳ್ಕರ್ ಈಟಿವಿ ಭಾರತ ಮೂಲಕ ತಿಳಿಸಿದ್ದಾರೆ.