ಕರ್ನಾಟಕ

karnataka

ETV Bharat / state

ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ - ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್

ಮದ್ಯದ ಅಮಲಿನಲ್ಲಿ ಇಬ್ಬರು ಗೆಳೆಯರ ಮಧ್ಯೆ ಪ್ರಾರಂಭವಾದ ಗಲಾಟೆ ಕೊನೆಗೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಪುಟ್ಟೇನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

murder
ಕೊಲೆ ಮಾಡಿದ ಆರೋಪಿ ಬಸವರಾಜ್

By

Published : Dec 7, 2022, 2:23 PM IST

ಬೆಂಗಳೂರು: ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಮಂಗಳವಾರ ತಡರಾತ್ರಿ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಿದ್ಧಲಿಂಗೇಶ್ವರ ಥಿಯೇಟರ್ ಬಳಿ ನಡೆದಿದೆ. ಬಸವರಾಜ್ (25) ಎಂಬಾತನನ್ನು ಕತ್ತು ಸೀಳಿ ಆತನ ಸ್ನೇಹಿತ ಅಭಿಜಿತ್ ಕೊಲೆಗೈದಿದ್ದಾನೆ.

ಪರಸ್ಪರ ಗಲಾಟೆ ಮಾಡಿಕೊಂಡು ಈ ಹಿಂದೆ ಒಮ್ಮೆ ಠಾಣೆ ಮೆಟ್ಟಿಲೇರಿದ್ದ ಅಭಿಜಿತ್, ಬಸವರಾಜ್ ಹಾಗೂ ಯಶವಂತ್ ಎಂಬಾತನನ್ನು ಪೊಲೀಸರು ಸಮಾಧಾನಗೊಳಿಸಿ ಕಳಿಸಿದ್ದರು. ತಡರಾತ್ರಿ ಬಸವರಾಜ್ ಹಾಗೂ ಅಭಿಜಿತ್ ಮದ್ಯಪಾನ ಮಾಡಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಕೋಪದಲ್ಲಿ ಆರೋಪಿಯು ತನ್ನ ಸ್ನೇಹಿತ ಬಸವರಾಜ್​ನ ಕತ್ತು ಸೀಳಿ ಕೊಲೆಗೈದು ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ.

ಕೊಲೆ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್

ಇದನ್ನೂ ಓದಿ:ಉದ್ಯಮಿ‌ ಪುತ್ರನ ಕೊಲೆ ಕೇಸ್: ಮಗನ ಹತ್ಯೆಗೆ ತಂದೆಯಿಂದ ಸುಪಾರಿ, ಶವ ಹೂತಿರುವ ಸ್ಥಳ ಪತ್ತೆ

ಈ ಕುರಿತು ಪುಟ್ಟೇನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details