ದೇವನಹಳ್ಳಿ(ಬೆಂಗಳೂರು): ಎಲೆಕ್ಟ್ರಿಕ್ ಗಿಟಾರ್ನಲ್ಲಿ ಮಾದಕ ದ್ರವ್ಯವನ್ನು ಮರೆಮಾಚಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾಗೆ ಏರ್ ಕಾರ್ಗೋ ಮೂಲಕ ಕಳ್ಳಸಾಗಣಿಕೆ ಮಾಡುತ್ತಿದ್ದ ಜಾಲವನ್ನು ಡಿಆರ್ಐ (ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್) ಪತ್ತೆ ಮಾಡಿದೆ.
ತಮಿಳುನಾಡಿನಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯಕ್ಕೆ ಡ್ರಗ್ಸ್ ಅನ್ನು ಏರ್ ಕಾರ್ಗೋ ಮೂಲಕ ಅಕ್ರಮವಾಗಿ ಕಳ್ಳ ಸಾಗಣಿಕೆ ಮಾಡಲಾಗುತ್ತಿತ್ತು. ಈ ಕುರಿತಂತೆ ಡಿಆರ್ಐ ಖಚಿತ ಮಾಹಿತಿ ಪಡೆದಿತ್ತು. ತಮಿಳುನಾಡಿನ ತಿರುಚ್ಚಿಯ ಕೊರಿಯರ್ ಏಜೆನ್ಸಿಯಲ್ಲಿ ಡ್ರಗ್ಸ್ ಬುಕ್ ಮಾಡಲಾಗಿದೆ ಎಂಬ ಸುಳಿವು ಅಧಿಕಾರಿಗಳಿಗೆ ಸಿಕ್ಕಿತ್ತು.