ಬೆಂಗಳೂರು:ಚಾಲನೆ ವೇಳೆ ಡ್ರೈವರ್ಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗದ ಮೇಲೆ ಬಸ್ ಹತ್ತಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.
ಇಂದು ಸಂಜೆ 7.50ರ ಸುಮಾರಿಗೆ ನಾಗವಾರ ಹೆಣ್ಣೂರು ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ನೋವು ತಾಳಲಾರದೆ ಚಾಲಕ ಪುಟ್ಪಾತ್ ಮೇಲೆ ಬಸ್ ಹರಿಸಿದ್ದಾನೆ.