ಬೆಂಗಳೂರು:ಇನ್ನೂ ಹತ್ತು ವಿಡಿಯೋ ಬಿಟ್ಟರೂ ನಾನು ಹೆದರುವುದಿಲ್ಲ. ದೂರು ನೀಡುವುದಿದ್ದರೆ ಯುವತಿ ಇಷ್ಟು ದಿನ ಏನು ಮಾಡುತ್ತಿದ್ದಳು? ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಲೇಡಿಯ ಮೂರನೇ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರುವುದಿಲ್ಲ ಎಂದ ರಮೇಶ್ ಜಾರಕಿಹೊಳಿ ಇಂದು ಮಧ್ಯಾಹ್ನ 2.30ಕ್ಕೆ ವಕೀಲ ಜಗದೀಶ್ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ಹೇಳಿರುವ ಕುರಿತು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಮೇಶ ಜಾರಕಿಹೊಳಿ, ಬೆತ್ತಲೆ ಪ್ರದರ್ಶನ ಮಾಡಿದವಳಿಗೆ ಇದೇನು ದೊಡ್ಡದಲ್ಲ. ಅವಳು ವಕೀಲರ ಮೂಲಕ ದೂರು ನೀಡಲಿ. ನಮಗೂ ವಕೀಲರಿದ್ದಾರೆ. ಅವರ ಭೇಟಿಗೆ ಈಗ ತೆರಳುತ್ತೇನೆ ಎಂದರು.
ನಾನೇಕೆ ಜಾಮೀನು ಪಡೆಯಬೇಕು. ಇದು ನನ್ನ ವಿರುದ್ಧದ ಮಹಾ ಷಡ್ಯಂತ್ರ. ದೂರು ಅವತ್ತೇ ನೀಡಬೇಕಿತ್ತು. ಇನ್ನೂ ಬಹಳ ವಿಷಯಗಳು ಹೊರಗೆ ಬರೋದಿದೆ. ಕಾದು ನೋಡಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಅವರು ದೂರು ನೀಡಲಿ. ನಾನು ಎದುರಿಸುದೋದಕ್ಕೆ ರೆಡಿ ಇದ್ದೇನೆ. ನನ್ನ ಬಳಿಯೂ ವಕೀಲರಿದ್ದಾರೆ. ಏನೂ ಟೆನ್ಷನ್ ಮಾಡಿಕೊಳ್ಳೋ ಅಗತ್ಯ ಇಲ್ಲ ಎಂದು ಕೂಲ್ ಆಗಿಯೇ ರಮೇಶ್ ಜಾರಕಿಹೊಳಿ ಉತ್ತರ ನೀಡಿದರು.
ಇಂಥ ಹತ್ತು ವಿಡಿಯೋ ಬಿಡಲಿ. ಕಂಪ್ಲೇಂಟ್ ಕೊಡೋ ಹಾಗಿದ್ರೆ ಮೊದಲೇ ಕೊಡಬೇಕಿತ್ತು. ಎಲ್ಲೋ ಕುಳಿತುಕೊಂಡು ಈಗ ಕಂಪ್ಲೇಂಟ್ ಕೊಡುತ್ತಿದ್ದಾರೆ ಎಂದು ಸಿಡಿ ಗ್ಯಾಂಗ್ ವಿರುದ್ಧ ರಮೇಶ್ ಜಾರಕಿಹೊಳಿ ಹರಿಹಾಯ್ದರು.