ರಾಜ್ಯದಲ್ಲಿ "ಪತ್ನಿ ಕಿರುಕುಳ"ದ ಪ್ರಮಾಣದಲ್ಲಿ ಶೇ 24ಕ್ಕೆ ಏರಿಕೆ: ಸಬಲೀಕರಣದಲ್ಲಿ ನಿಧಾನಗತಿ ಉನ್ನತಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ.
ಕಿರುಕುಳ
By
Published : Dec 24, 2020, 7:33 PM IST
ಬೆಂಗಳೂರು:ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ರಾಷ್ಟ್ರೀಯ ಕುಟುಂಬ ಸ್ವಾಸ್ಥ್ಯ ಸರ್ವೆಯ ಕರ್ನಾಟಕದ ವರದಿ ಬಿಡುಗಡೆಯಾಗಿದ್ದು, ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಅಂಕಿ - ಅಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಮಹಿಳಾ ಸಬಲೀಕರಣದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದ್ದು, ಮಹಿಳೆಯರ ಮೇಲಿನ ಕೌಟಿಂಬಿಕ ದೌರ್ಜನ್ಯದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಿದೆ.
ಮಹಿಳಾ ಸಬಲೀಕರಣ
2019-20. 2015-16
ವಿಷಯ
2015-16 (ಶೇ.)
2019-20 (ಶೇ.)
ಸಾಮಾನ್ಯ ಮದುವೆಯಾದ ಮಹಿಳೆಯರು ತೆಗೆದುಕೊಳ್ಳುವ ನಿರ್ಧಾರಗಳ ಪ್ರಮಾಣ
80.4
82.7
12 ತಿಂಗಳಲ್ಲಿ ಉದ್ಯೋಗಸ್ಥ ಹಾಗೂ ವೇತನ ಪಡೆಯುತ್ತಿರುವ ಮಹಿಳೆಯರು
29.1
37
ಭೂಮಿ ಅಥವಾ ಮನೆ ಹೊಂದಿರುವ ಸ್ತ್ರೀಯರು
51.8
67.6
ಬ್ಯಾಂಕ್ ಖಾತೆ ಅಥವಾ ಉಳಿತಾಯ ಹೊಂದಿರುವ ಮಹಿಳೆಯರು
59.4
88.7
ಮೊಬೈಲ್ ಹೊಂದಿರುವ ಸ್ತ್ರೀಯರು
47.1
61.8
ಋತುಕಾಲದಲ್ಲಿ ಸುರಕ್ಷತೆ ಹಾಗೂ ನೈರ್ಮಲ್ಯವಾಗಿರುವ ಮಹಿಳಾ ಪ್ರಮಾಣ
70.3
84.2
ಮಹಿಳಾ ದೌರ್ಜನ್ಯ
ವಿಷಯ
2015-16 (ಶೇ.)
2019-20 (ಶೇ.)
ಮದುವೆಯಾದ 18-49 ವರ್ಷದೊಳಗಿನ ಮಹಿಳೆಯರಿಗೆ ಕಿರುಕುಳ ಪ್ರಮಾಣ
20.6
44.4
18-49 ವರ್ಷದೊಳಗಿನ ಗರ್ಭಿಣಿಯರಿಗೆ ದೈಹಿಕ ದೌರ್ಜನ್ಯ
6.5
5.8
18-29 ವರ್ಷ ವಯಸ್ಸಿನ ಯುವತಿಯರಿಗೆ ಲೈಂಗಿಕ ಕಿರುಕುಳ
10.3
11
ಕೆ.ಎಸ್ ವಿಮಲಾ
ಈ ಕುರಿತು ಮಾತನಾಡಿದ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾ, ಸರ್ಕಾರದ ಕೆಲವೊಂದು ಅಂಕಿ - ಅಂಶಗಳ ಕುರಿತು ಅನುಮಾನ ಉಂಟು ಮಾಡಿದೆ. ಕುಟುಂಬದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಕಿರುಕುಳ ಪ್ರಮಾಣ ಹೆಚ್ಚಾಗುತ್ತಿರುವುದು ದುರದೃಷ್ಟಕರ ಎಂದರು.