ಬೆಂಗಳೂರು: ಲಾಕ್ಡೌನ್ನಿಂದಾಗಿ ಬೀದಿನಾಯಿಗಳು ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ನಾಯಿಗಳ ಹಸಿವಿನ ಚೀಲ ತುಂಬಲು ಆಡುಗೋಡಿ ಪೊಲೀಸ್ ಶ್ವಾನದಳದ ಎಸಿಪಿ ನಿಂಗರೆಡ್ಡಿ ಅವರು ಮುಂದಾಗಿದ್ದಾರೆ.
ಸುಮಾರು 500ಕ್ಕೂ ಅಧಿಕ ಶ್ವಾನಗಳಿಗೆ ಮಾಂಸ ಮಿಶ್ರಿತ ಆಹಾರ ನಿತ್ಯ ತಮ್ಮ ಪೊಲೀಸ್ ಶ್ವಾನಗಳಿಗೆ ತಯಾರಾಗುವ ಊಟದ ಜೊತೆಗೆ ಬೀದಿನಾಯಿಗಳಿಗೂ ಊಟ ತಯಾರಿಸಿ ಸುಮಾರು 500ಕ್ಕೂ ಅಧಿಕ ಶ್ವಾನಗಳಿಗೆ ಮಾಂಸ ಮಿಶ್ರಿತ ಆಹಾರವನ್ನ ಮೂರು ಹೊತ್ತು ನೀಡುತ್ತಿದ್ದಾರೆ.
ಎಸಿಪಿ ನಿಂಗರೆಡ್ಡಿ ಅವರು ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಭಾಗಿಯಾಗುವ ಶ್ವಾನದಳದ ಎಸಿಪಿಯಾಗಿದ್ದಾರೆ. ಯಾವುದೇ ಅಪರಾಧ ಚಟುವಟಿಕೆ, ಪಿಎಂ ಭದ್ರತೆ, ಸಿಎಂ ಭದ್ರತೆ, ಬಾಂಬ್ ಸ್ಫೋಟ ನಡೆದಾಗ ಸ್ಥಳದಲ್ಲಿ ಆರೋಪಿಗಳ ಜಾಡನ್ನ ಪತ್ತೆ ಮಾಡುವ ಕುರಿತು ಶ್ವಾನಗಳಿಗೆ ಪ್ರತಿ ದಿನ ತರಬೇತಿ ನೀಡುತ್ತಾರೆ.
ಬೀದಿನಾಯಿಗಳ ಹಸಿವು ನೀಗಿಸುತ್ತಿರುವ ಶ್ವಾನದಳದ ಎಸಿಪಿ ನಿತ್ಯ ಪೊಲೀಸ್ ಶ್ವಾನಗಳ ಜೊತೆ ಇರುತ್ತೇವೆ. ನಮಗೆ ಶ್ವಾನದ ಕಷ್ಟ ಏನು, ಅವುಗಳು ಹಸಿವು ಯಾವ ರೀತಿ ಅನ್ನೊದರ ಬಗ್ಗೆ ಅರಿವಿದೆ. ಮಾತು ಬರುವ ಮನುಷ್ಯ ಯಾರನ್ನಾದರೂ ಕೇಳಿಕೊಂಡು ಆಹಾರ ಪಡೆಯುತ್ತಾನೆ. ಆದರೆ ಬೀದಿನಾಯಿಗಳು ಎಲ್ಲಿ ಹೋಗಿ, ಯಾರನ್ನು ಕೇಳಿ ಆಹಾರ ಸೇವೆನೆ ಮಾಡಬೇಕು? ಹೀಗಾಗಿ ಸದ್ಯ ನಮ್ಮ 62 ಪೊಲೀಸ್ ನಾಯಿಗಳ ಜೊತೆ 500 ಬೀದಿನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೀದಿ ನಾಯಿಗಳಿಗೆ ಆಹಾರ ನೀಡುವ ಡಾಗ್ ಸ್ಕ್ವಾಡ್ ಎಸಿಪಿ ನಾವೇ ಪ್ರತಿ ರಸ್ತೆ, ಗಲ್ಲಿಗೆ ತೆರಳಿ ಆಹಾರ ಪೂರೈಕೆ ಮಾಡುತ್ತೇವೆ. ಬಹುತೇಕ ಪ್ರಾಣಿ ಪ್ರಿಯರು ಹಾಗೆ ಶ್ವಾನದಳದ ಡಿಸಿಪಿಯವರು ಸಹಾಯಹಸ್ತ ಚಾಚಿದ್ದಾರೆ ಎಂದು ಅವರ ಸಹಾಯಕರು ಹೇಳುತ್ತಿದ್ದಾರೆ.