ಕರ್ನಾಟಕ

karnataka

ETV Bharat / state

ಹೂಡಿಕೆದಾರರ ಹಣದಿಂದ ಕೋಟಿ ಕೋಟಿ ಸಂಗ್ರಹ.. ಟೋಪಿವಾಲಾನ ಅಸಲಿ ಆಸ್ತಿ ಇಷ್ಟು.. - news kannada

ಈ ಎಲ್ಲಾ ಪ್ರಾಪರ್ಟಿಗಳು ಐಎಂಎ ಹೂಡಿಕೆಯಲ್ಲಿ ಬಂದ ಹಣದಿಂದ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಐಎಂಎ ಮಾಲೀಕತ್ವದಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ವಶಕ್ಕೆ ಪಡೆದಿದೆ.

ಮನ್ಸೂರ್​ ಖಾನ್

By

Published : Jul 20, 2019, 2:39 PM IST

ಬೆಂಗಳೂರು:ಇದೀಗ ಪೊಲೀಸ್​ ವಶದಲ್ಲಿರುವ ವಂಚಕ ಮನ್ಸೂರ್​ ಖಾನ್​ ತಾನು ಮಾಡಿದ ಆಸ್ತಿ ಎಷ್ಟು ಅಂತಾ ನಿಮಗೆ ಗೊತ್ತಾ? ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಇತ್ತೀಚೆಗೆ ವಿದೇಶಕ್ಕೆ ಹಾರಿದ್ದ ಮನ್ಸೂರ್​ ಖಾನ್, ಇದೀಗ ಸೆರೆ ಸಿಕ್ಕಿದ್ದು ಈವರೆಗೆ ಆತ ಕೂಡಿಟ್ಟ​ ಆಸ್ತಿ ಬಗ್ಗೆ ಎಸ್​ಐಟಿ ಟೀಂ ಮಾಹಿತಿ ಸಂಗ್ರಹಿಸಿದೆ. ಈ ಆಸ್ತಿ ಜಪ್ತಿ ಮಾಡಲು ಸರ್ಕಾರ‌ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಪೊಲೀಸ್​ ವಶದಲ್ಲಿರುವ ವಂಚಕ ಮನ್ಸೂರ್​ ಖಾನ್​

ಕಂದಾಯ ಇಲಾಖೆ ಇದೀಗ ಮನ್ಸೂರ್ ಖಾನ್​ ಆಸ್ತಿ ಪಟ್ಟಿ ಮಾಡಿದ್ದು, ಒಟ್ಟು 23 ಕಡೆ 279 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಹಾಗೆ 4 ಜ್ಯೂವೆಲ್ಲರಿಗಳಲ್ಲಿ 65 ಕೋಟಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಲವು ಬ್ಯಾಂಕ್ ಖಾತೆಗಳಲ್ಲಿ 12 ಕೋಟಿ ನಗದು. ಇವೆಲ್ಲವನ್ನೂ ಜಪ್ತಿ ಮಾಡಲು ಕಂದಾಯ ಇಲಾಖೆ ಈ ಬಗ್ಗೆ ನೋಟಿಫಿಕೇಷನ್ ಹೊರಡಿಸಿದೆ.

ಪತ್ತೆಯಾದ ಆಸ್ತಿ ಮೌಲ್ಯ :

  • ಜಯನಗರ 7ನೇ ಬ್ಲಾಕ್​​​ನಲ್ಲಿ 9 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​
  • ತಿಲಕ್‌ನಗರದಲ್ಲಿ 11 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​
  • ಜಯನಗರ 4ನೇ ಟಿ ಬ್ಲಾಕ್​​ನಲ್ಲಿ 11 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​
  • ಪಾಟ್ರಿ ಟೌನ್ ಬಳಿ 12 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​
  • ಪ್ರೇಜರ್ ಟೌನ್ ಬಳಿ 18 ಕೋಟಿಯ ಕಟ್ಟಡ
  • ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿ 2.5 ಕೋಟಿ ಮೌಲ್ಯದ ಕಟ್ಟಡ
  • ಟಾಸ್ಕರ್ ಟೌನ್ ಬಳಿ 25 ಕೋಟಿ ಮೌಲ್ಯದ ಕಟ್ಟಡ
  • ರಿಚ್ಮಂಡ್ ಟೌನ್ ಬಳಿ ಜಮೀರ್ ಅಹ್ಮದ್ ಅವರ 10 ಕೋಟಿ ಮೌಲ್ಯದ ಆಸ್ತಿ ಖರೀದಿ
  • ರಿಚ್ಮಂಡ್ ಟೌನ್ ಬಳಿ 5.2 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​
  • ಹೆಚ್‌ಬಿಆರ್ ಲೇಔಟ್ ಬಳಿ 13 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್​
  • ರಿಚರ್ಡ್ಸ್‌ಟೌನ್ ಬಳಿ 23 ಕೋಟಿ ಮೌಲ್ಯದ ನಿವೇಶನ
  • ಭಾರತಿನಗರ ಪೊಲೀಸ್ ಠಾಣೆ ಬಳಿ 15 ಕೋಟಿ ಮೌಲ್ಯದ ಕಟ್ಟಡ
  • ಚಿಕ್ಕಬಳ್ಳಾಪುರ ಮಂಡಿಕಲ್ ಬಳಿ 22 ಎಕರೆ ಜಮೀನು
  • ಎಸ್ಐಟಿ ತಂಡ ಒಟ್ಟು 23 ಕಡೆ ಆಸ್ತಿ ಪತ್ತೆ ಮಾಡಿದೆ ಎಂದು ತಿಳಿದು ಬಂದಿದೆ
  • ಇವೆಲ್ಲದರ ಈಗಿನ ಮಾರುಕಟ್ಟೆ ಮೌಲ್ಯ 279 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಕಾರುಗಳ ಮೌಲ್ಯ :

  • 50 ಲಕ್ಷದ ಜಾಗ್ವಾರ್ ಕಾರು
  • 50 ಲಕ್ಷದ ರೇಂಜ್ ರೋವರ್ ಕಾರು
  • 20 ಲಕ್ಷದ ಇನ್ನೋವಾ ಕ್ರಿಸ್ಟಾ ಕಾರು ಪತ್ತೆ
  • ಮೂರು ಕಾರುಗಳ ಒಟ್ಟು ಮೌಲ್ಯ 1.20 ಕೋಟಿ

ಜ್ಯೂವೆಲ್ಲರಿ ಮೌಲ್ಯ :

  • ಐಎಂಎ ಜ್ಯೂವೆಲ್ಲರಿ ಜಯನಗರ 34.16 ಕೋಟಿ ಮೌಲ್ಯ ಚಿನ್ನಾಭರಣ
  • ಐಎಂಎ ಜ್ಯೂವೆಲ್ಲರಿ ಶಿವಾಜಿನಗರ 20.10 ಕೋಟಿ ಮೌಲ್ಯ ಚಿನ್ನಾಭರಣ
  • ಐಎಂಎ ಗೋಲ್ಡ್ ಶಿವಾಜಿನಗರ 11.41 ಕೋಟಿ ಮೌಲ್ಯ ಚಿನ್ನಾಭರಣ
  • ಐಎಂಎ ಗೋಲ್ಡ್ ತಿಲಕ್‌ನಗರ 31 ಲಕ್ಷ ಮೌಲ್ಯ ಚಿನ್ನಾಭರಣ
  • ಐಎಂಎ ಗೋಲ್ಡ್ ಯಶವಂತಪುರ 36 ಲಕ್ಷ ಮೌಲ್ಯ ಚಿನ್ನಾಭರಣ
  • ಒಟ್ಟು 65 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಡೈಮಂಡ್ ಆಭರಣಗಳು ಪತ್ತೆಯಾಗಿದೆ.

ಈ ಎಲ್ಲಾ ಪ್ರಾಪರ್ಟಿಗಳು ಐಎಂಎ ಹೂಡಿಕೆಯಲ್ಲಿ ಬಂದ ಹಣದಿಂದ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಐಎಂಎ ಮಾಲೀಕತ್ವದಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ವಶಕ್ಕೆ ಪಡೆದಿದೆ.

ABOUT THE AUTHOR

...view details