ಕರ್ನಾಟಕ

karnataka

ETV Bharat / state

ಡಿಕೆ ಸುರೇಶ್ ಅವರಿಗೆ ಕೊರೊನಾ ಸೋಂಕು.. ಟ್ವೀಟ್ ಮೂಲಕ ದೃಢಪಡಿಸಿದ ಸಂಸದರು - D.K.Suresh Corona Positive

ಕಳೆದ ಒಂದು ವಾರದಿಂದ ನಿರಂತರ ಸಾರ್ವಜನಿಕ ಕಾರ್ಯಕ್ರಮ ಹಾಗೂ ಚಟುವಟಿಕೆಯಲ್ಲಿ ತೊಡಗಿದ್ದ ಡಿ ಕೆ ಸುರೇಶ್ ಅವರಿ​​ಗೆ ನಿನ್ನೆ ರಾತ್ರಿ ನೆಗಡಿ ಹಾಗೂ ಜ್ವರ ಕಾಡಿತ್ತು..

D.K.Suresh
ಡಿ.ಕೆ.ಸುರೇಶ್

By

Published : Oct 6, 2020, 4:13 PM IST

Updated : Oct 6, 2020, 4:22 PM IST

ಬೆಂಗಳೂರು :ಬೆಂ. ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಅವರಿಗೆ​ ಕೊರೊನಾ ಸೋಂಕು ತಗುಲಿರುವುದಾಗಿ ವರದಿಯಾಗಿದೆ. ಈ ಸಂಬಂಧ ಸಂಸದರೇ ಖುದ್ದು ಟ್ವೀಟ್ ಮಾಡಿ ದೃಢಪಡಿಸಿದ್ದಾರೆ.

ಕೋವಿಡ್-19 ಪರೀಕ್ಷೆಯಲ್ಲಿ ನನಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯಕ್ಕೆ ನನ್ನ ಆರೋಗ್ಯ ಸ್ಥಿರವಾಗಿದೆ ಹಾಗೂ ಸುರಕ್ಷಿತವಾಗಿ ಇದ್ದೇನೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಸ್ನೇಹಿತರು, ಬಂಧುಗಳು ಹಾಗೂ ನನ್ನ ಜೊತೆಗೆ ಇದ್ದ ಸಿಬಿಐ ಅಧಿಕಾರಿಗಳು, ಮಾಧ್ಯಮ ಮಿತ್ರರಿಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಕಳೆದ ಒಂದು ವಾರದಿಂದ ನಿರಂತರ ಸಾರ್ವಜನಿಕ ಕಾರ್ಯಕ್ರಮ ಹಾಗೂ ಚಟುವಟಿಕೆಯಲ್ಲಿ ತೊಡಗಿದ್ದ ಡಿ ಕೆ ಸುರೇಶ್ ಅವರಿ​​ಗೆ ನಿನ್ನೆ ರಾತ್ರಿ ನೆಗಡಿ ಹಾಗೂ ಜ್ವರ ಕಾಡಿತ್ತು.

ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಟ್ಟಿದ್ದರು. ಇದೀಗ ಕೊರೊನಾ ದೃಢಪಟ್ಟಿದೆ ಎಂಬ ಮಾಹಿತಿ ನೀಡಿದ್ದಾರೆ. ನಿನ್ನೆ ದಿನವಿಡೀ ಸಿಬಿಐ ಅಧಿಕಾರಿಗಳ ಜೊತೆ ವಿಚಾರಣೆ ವೇಳೆ ಸಂಸದರು ಪಾಲ್ಗೊಂಡಿದ್ದು, ಇದೀಗ ಸಿಬಿಐ ಅಧಿಕಾರಿಗಳಿಗೂ ಆತಂಕ ಮೂಡಿದೆ.

Last Updated : Oct 6, 2020, 4:22 PM IST

ABOUT THE AUTHOR

...view details