ಬೆಂಗಳೂರು: ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು ಅವಕಾಶ ಕೋರಿದ ಕೈ ನಾಯಕರಿಗೆ ಪತ್ರದ ಮುಖೇನಾ ಮನವಿ ಸಲ್ಲಿಸಿ ಎಂದ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಕೈ ನಾಯಕ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.
ಪತ್ರದ ಮೂಲಕ ಮನವಿ ಸಲ್ಲಿಸಿ ಎಂದ ಡಿಜಿಪಿ ವಿರುದ್ಧ ಡಿಕೆಶಿ ಗರಂ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ ಪತ್ರ ಮುಖೇನಾ ಮನವಿ ಕೊಡಿ ಎಂದು ಹೇಳಿದ್ದಾರೆ. ಆದರೆ ಅಲ್ಲಿ ಬಿಜೆಪಿ ಎಂಎಲ್ಎಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅದಷ್ಟು ಬೇಗ ಶಾಸಕರನ್ನು ಬಂಧನದಿಂದ ಬಿಡಿಸಿ ಮಾತುಕತೆಗೆ ಅವಕಾಶ ಕೊಡಬೇಕು
ಭೇಟಿಗೆ ಅವಕಾಶ ಕೊಡದಿದ್ದರೆ ನಮ್ಮ ಕಾರ್ಯಕರ್ತರನ್ನು ಕಾಲ್ ಮಾಡ್ತಿನಿ. ಹೋಟೆಲ್ಗೆ ಹೋಗೋಕೆ ಯಾರ ಪರ್ಮಿಷನ್ ಬೇಕು. ಆದರೆ ಈಗ ಪೊಲೀಸರು ಹೊಸ ರೂಲ್ಸ್ ಹೇಳ್ತಾ ಇದ್ದಾರೆ. ಅವಕಾಶ ಸಿಗದಿದ್ರೆ ಮುಂದೆ ಏನು ಮಾಡಬೇಕು ಎಂದು ನಮ್ಮವರೊಟ್ಟಿಗೆ ಚರ್ಚಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಡಿಜಿ-ಐಜಿ ಎದುರು ಕಾಂಗ್ರೆಸ್ ನಾಯಕರು ವಾಗ್ವಾದ ನಡೆಸಿ ನಿಮ್ಮ ಹಾಜರಾತಿಯಲ್ಲಿ ಮಧ್ಯಪ್ರದೇಶ ಶಾಸಕರನ್ನು ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಕೊಡಿ.ನಾವ್ಯಾರೂ ಒಳಗೆ ಹೋಗೋದೀಲ್ಲ, ಕೇವಲ ದಿಗ್ವಿಜಯ್ ಸಿಂಗ್ ಮಾತ್ರ ಒಳಗೆ ಪ್ರವೇಶಿಸುತ್ತಾರೆ. ಪೊಲೀಸರೇ ಹೀಗೆ ರಾಜಕೀಯ ಪಕ್ಷದ ರೀತಿ ಮಾಡಿದರೆ ಹೇಗೆ ಅಧಿಕಾರ ಇರುವವರೇ ರಾಜಕೀಯ ಮಾಡಿದರೆ ಹೇಗೆ ಎಂದು ಡಿಜಿಪಿಗೆ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.