ಬೆಂಗಳೂರು:ಡಿ.ಕೆ.ಶಿವಕುಮಾರ್ರನ್ನು ಇಡಿ ಬಂಧಿಸಿದರೂ ಕೂಡ ಅವರು ವಿಚಲಿತರಾಗಿಲ್ಲ ಎಂದು ಡಿಕೆಶಿ ಭೇಟಿ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಡಿಕೆಶಿ ವಿಚಲಿತರಾಗಿಲ್ಲ, ಧೈರ್ಯವಾಗಿದ್ದಾರೆ: ಸಿದ್ದರಾಮಯ್ಯ - ಹೈಕಮಾಂಡ್
ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದಿಂದ ಮಾತುಕತೆ ಮುಗಿಸಿ ಹೊರಟ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಡಿಕೆಶಿ ಧೈರ್ಯವಾಗಿದ್ದಾರೆ. ಅವರು ಇಡಿ ವಶದಲ್ಲಿದ್ದಾಗ ನಾನು ದೆಹಲಿಗೆ ತೆರಳಿದ್ದೆ. ಆದರೆ ಅವರ ಭೇಟಿಗೆ ಇಡಿ ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಭೇಟಿ ಮಾಡಿದ್ದೇನೆ ಎಂದರು.
ಡಿಕೆಶಿ ವಿಚಲಿತರಾಗಿಲ್ಲ, ಧೈರ್ಯವಾಗಿದ್ದಾರೆ: ಸಿದ್ದರಾಮಯ್ಯ ಹೇಳಿಕೆ
ಸದಾಶಿವನಗರ ಡಿಕೆಶಿ ನಿವಾಸದಿಂದ ಮಾತುಕತೆ ಮುಗಿಸಿ ಹೊರಟ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಡಿಕೆಶಿ ಧೈರ್ಯವಾಗಿದ್ದಾರೆ. ಅವರು ಇಡಿ ವಶದಲ್ಲಿದ್ದಾಗ ನಾನು ದೆಹಲಿಗೆ ತೆರಳಿದ್ದೆ. ಆದರೆ ಅವರ ಭೇಟಿಗೆ ಇಡಿ ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಭೇಟಿ ಮಾಡಿದ್ದೇನೆ ಎಂದರು.
ಡಿಕೆಶಿ ಆರೋಗ್ಯ ಇದೀಗ ಸುಧಾರಿಸಿದೆ. ಆದರೆ ಈ ವೇಳೆ ರಾಜಕೀಯ ಕುರಿತು ಚರ್ಚೆ ಮಾಡಿಲ್ಲ. ಮುಂದಿನ ದಿನದಲ್ಲಿ ಡಿಕೆಶಿಗೆ ಯಾವ ಸ್ಥಾನ ಕೊಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿದರು.