ಕರ್ನಾಟಕ

karnataka

ETV Bharat / state

ಇಡಿ ಹಠಾತ್ ಸಮನ್ಸ್​ ನೀಡಿರುವುದು ರಾಜಕೀಯ ದುರುದ್ದೇಶಪೂರಿತ.. ಮಾಜಿ ಸಚಿವ ಡಿಕೆಶಿ ಟ್ವೀಟ್ - ಡಿಕೆ ಶಿವಕುಮಾರ್​

ಇಡಿ ಹಠಾತ್ ಆಗಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿರುವುದು ದುರುದ್ದೇಶಪೂರಿತವಾಗಿದೆ ಎಂದು ಟ್ವೀಟ್​ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಮಾಜಿ ಸಚಿವ ಡಿಕೆಶಿ ಹೊರಹಾಕಿದ್ದಾರೆ.

ಡಿಕೆಶಿ

By

Published : Aug 30, 2019, 10:07 AM IST

ಬೆಂಗಳೂರು:ಇಡಿ ಹಠಾತ್ ಆಗಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿರುವುದು ದುರುದ್ದೇಶಪೂರಿತವಾಗಿದೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಡಿಕೆಶಿ, ನನಗೆ ನಿನ್ನೆ ರಾತ್ರಿ 9.40ಕ್ಕೆ ಇಡಿ ಶುಕ್ರವಾರ ದಿಲ್ಲಿಯ ಇಡಿ‌ ಕಚೇರಿಗೆ ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ರೀತಿ ಹಠಾತ್ ನೋಟಿಸ್ ನೀಡಿರುವ ಹಿಂದೆ ರಾಜಕೀಯ ದುರುದ್ದೇಶ ಇದೆ. ನಾನು ದೇಶದ ಕಾನೂನು ಮೇಲೆ ಗೌರವ ಹೊಂದಿದ್ದು, ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತೇನೆ ಮತ್ತು ತನಿಖಾ ಸಂಸ್ಥೆಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ರೆಸಾರ್ಟ್ ಆತಿಥ್ಯ ನೀಡಿದ್ದಕ್ಕಾಗಿ ರಾಜಕೀಯ ಪ್ರೇರಿತವಾಗಿ ನನ್ನ ಮೇಲೆ ಐಟಿ ದಾಳಿ ಮಾಡಿತ್ತು. ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ಜವಾಬ್ದಾರಿಯುತ ರಾಜಕಾರಣಿಯಾಗಿ, ಪಕ್ಷ ಏನು ನನಗೆ ಹೇಳಿದೆ ಅದನ್ನು ‌ನಾನು ಮಾಡಿದ್ದೆ. ಅದಕ್ಕೋಸ್ಕರ ಈಗ ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾನೂನು ವ್ಯವಸ್ಥೆ ಮೇಲೆ‌ ನನಗೆ ಸಂಪೂರ್ಣ ನಂಬಿಕೆ ಇದ್ದು, ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಇದನ್ನು ಎದುರಿಸುತ್ತೇನೆ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details