ಬೆಂಗಳೂರು: ಡಿ.ಕೆ.ರವಿ ಹೇಡಿತನ ಮಾಡಿಕೊಂಡ. ಧೈರ್ಯವಾಗಿ ಅವನು ಇರಬೇಕಿತ್ತು. ಅವನ ಹೆಂಡ್ತಿ, ತಂದೆ ತಾಯಿಯನ್ನ ನೋಡಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರ್.ಆರ್.ನಗರದಲ್ಲಿ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡು ಹೇಡಿತನ ಮಾಡಿದರು. ಧೈರ್ಯವಾಗಿ ಇರುವುದನ್ನು ಬಿಟ್ಟು, ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ನಮ್ಮ ಕಾಲದಲ್ಲಿ ಅದೆಲ್ಲಾ ಆಯ್ತು. ಪ್ರತಿಭಟನೆ ಆಯ್ತು, ಸಿಬಿಐಗೆ ಕೊಟ್ವಿ ಎಂದು ಸ್ಮರಿಸಿದರು.
ನಾನು ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಹೋರಾಟ ಮಾಡಿದ್ದೀರಾ. ನಿಮ್ಮ ಹೋರಾಟ ರಾಜ್ಯದ ರಾಜಕಾರಣದಲ್ಲಿ ಇತಿಹಾಸ ಪುಟ ಸೇರಿದೆ. ಅಶ್ವತ್ಥ ನಾರಾಯಣ್ ಸಾಹೇಬ್ರು, ಅಶೋಕ್ ಅಣ್ಣ, ಸಿ.ಟಿ ರವಿ ಸಾಹೇಬ್ರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಮಾತಾಡಿದ್ರೆ ಪ್ರಮೋಷನ್ ಆಗುತ್ತದೆ. ಪ್ರಮೋಷನ್ ಸಿಗುತ್ತೆ ಅಂದ್ರೆ ನನ್ನ ಬಗ್ಗೆ ಮಾತಾಡಲಿ. ಅಶೋಕ್ ಅಣ್ಣನಿಗೆ ಪ್ರಮೋಷನ್ ನಿಂದ ಡಿ ಪ್ರಮೋಟ್ ಆಗಿದೆ ಎಂದು ಕಿಡಿ ಕಾರಿದರು.
ಬಂಡೆ ಪುಡಿ ಪುಡಿ ಆಗುತ್ತೆ ಅಂತ ಬಿಜೆಪಿ ಅಧ್ಯಕ್ಷರು ಹೇಳುತ್ತಾರೆ. ಬಂಡೆಯಿಂದ ಜನರಿಗೆ ಅನುಕೂಲ ಆದರೆ ಸಾಕು. ಬಿಜೆಪಿ ಅಭ್ಯರ್ಥಿ ಮೂವರು ಮಹಿಳಾ ಮಾಜಿ ಕಾರ್ಪೋರೇಟರ್ಗೆ ತೊಂದರೆ ಕೊಟ್ರು. ಆಶಾ ಸುರೇಶ್, ಮಂಜುಳಾ ನಾರಾಯಣಸ್ವಾಮಿ, ಮಮತಾ ವಾಸುದೇವ ಇವರು ನಮ್ಮ ಸಮಾಜದವರು. ನಾವು ರಕ್ಷಣೆ ಕೊಡೋದಕ್ಕೆ ಏನೇನು ಪ್ರಯತ್ನ ಮಾಡಿದ್ದೆವು. ಹೆಸರು ಮುಂದೆ ಗೌಡ ಅಂತ ಇರೋರನ್ನು ವೋಟರ್ ಐಡಿ ಲಿಸ್ಟ್ ನಲ್ಲಿ ತೆಗೆಸಲಾಗಿದೆ. ಗೌಡ ಅಂತ ಹೆಸರನ್ನ ವೋಟರ್ ಲಿಸ್ಟ್ ನಲ್ಲಿ ಡಿಲೀಟ್ ಮಾಡಿಸಿದ್ದಾರೆ. ಆರ್.ಆರ್. ನಗರದಲ್ಲಿ ತೆಗಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.