ಬೆಂಗಳೂರು:ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ಸಮಿತಿ ವರದಿ ಸಲ್ಲಿಕೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರೇವಣ್ಣ ,ಉಗ್ರಪ್ಪ ನನ್ನನ್ನ ಭೇಟಿ ಮಾಡಿದ್ದಾರೆ. ಅಲ್ಲಿ ನಡೆದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ವರದಿ ಬಂದ ಮೇಲೆ ನಮ್ಮ ನಾಯಕರು ಮಾತನಾಡುತ್ತಾರೆ. ಎಲ್ಲಿ ಲೋಪ ಆಗಿದೆ ಎಂದು ವಿವರಿಸಲಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಉಪಕುಲಪತಿ ಆದೇಶ ಹೊರಡಿಸಿದ್ದು, ಕ್ಯಾಂಪಸ್ ಒಳಗಡೆ ಸಂಜೆ ಆರು ಗಂಟೆ ಬಳಿಕ ಯಾರು ಓಡಾಡದಂತೆ ಹೇಳಿದ್ದಾರೆ. ಇದೊಂದು ಅವೈಜ್ಞಾನಿಕ ನಿಯಮ. ಈ ವಿಚಾರವಾಗಿ ನಾನು ಗರ್ವನರ್ ಜೊತೆಗೆ ಮಾತನಾಡುತ್ತೇನೆ ಎಂದರು.
ಹೆಣ್ಣು ಮಕ್ಕಳು ರಾತ್ರಿ ವೇಳೆ ಓಡಾಡಬಾರದು ಎಂದರೆ ಹೆಗೆ?, ಗೃಹ ಸಚಿವರು ತಪ್ಪಾ, ಪೊಲೀಸ್ ಕಮಿಷನರ್ ತಪ್ಪಾ, ಜನರಿಗೆ ರಕ್ಷಣೆ ಕೊಡಬೇಕಾಗಿರುವುದು ಪೊಲೀಸರ ಜವಾಬ್ದಾರಿಯಾಗಿದೆ. ಮೈಸೂರು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅನೇಕ ಕಡೆಗಳಿಂದ ಸಾಕಷ್ಟು ಜನ ಅಲ್ಲಿಗೆ ಬರ್ತಾರೆ. ಅವರು ಓಡಾಡಬಾರದು ಅಂದ್ರೆ ಹೇಗೆ? ಉಪಕುಲಪತಿಗಳ ಆದೇಶ ಕಾನೂನು ಬಾಹಿರ. ಇದರ ವಿರುದ್ಧ ರಾಜ್ಯಪಾಲರು ಕ್ರಮ ತೆಗೆದುಕೊಂಡು ಮನೆಗೆ ಕಳಿಸುವಂತೆ ಒತ್ತಾಯಿಸಿದರು.