ಕರ್ನಾಟಕ

karnataka

ETV Bharat / state

ಸರ್ಕಾರದಲ್ಲಿ ಸಮನ್ವಯತೆಯ ಕೊರತೆ, ಇದರಲ್ಲಿ ನಾವು ರಾಜಕಾರಣ ಮಾಡಲ್ಲ: ಡಿಕೆಶಿ - dk shivakumar latest news

ಇಂದು ಸಿಎಂ ಭೇಟಿಯಲ್ಲಿ ಡಿ.ಕೆ.ಶಿವಕುಮಾರ್​​ ರಾಜ್ಯದಲ್ಲಿನ ಪ್ರಸ್ತುತ ಸ್ಥಿತಿಗತಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಚಿವರು, ಅಧಿಕಾರಿಗಳ‌ಲ್ಲಿ ಸಮನ್ವಯದ ಕೊರತೆ ಇದೆ ಎಂದು ಆರೋಪಿಸಿದ್ದಾರೆ.

DK Shivakumar criticize on government
ಸರ್ಕಾರದಲ್ಲಿ ಸಮನ್ವಯತೆಯ ಕೊರತೆಯಿದೆ, ನಾವು ರಾಜಕಾರಣ ಮಾಡಲ್ಲ: ಡಿಕೆಶಿ

By

Published : Apr 19, 2020, 3:28 PM IST

ಬೆಂಗಳೂರು: ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ‌.

ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸರ್ಕಾರದ ಇದುವರೆಗಿನ ಕ್ರಮಗಳಲ್ಲಿ ಸ್ವಲ್ಪ ಲೋಪಗಳಿದ್ದು, ಅದನ್ನು ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರದ ಸಚಿವರು, ಅಧಿಕಾರಿಗಳ‌ಲ್ಲಿ ಸಮನ್ವಯತೆ ಕೊರತೆ ಇದೆ. ಸಿಎಂ ಶೇ. 33ರಷ್ಟು ಸಿಬ್ಬಂದಿ ಐಟಿ/ಬಿಟಿಯಲ್ಲಿ ಕೆಲಸಕ್ಕೆ ಅವಕಾಶ ಅಂತಾರೆ, ಸರ್ಕಾರದ ಒಬ್ಬ ಮಂತ್ರಿ ಶೇ. 50ರಷ್ಟು ಐಟಿ/ಬಿಟಿಗೆ ಅವಕಾಶ ಅಂತಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು. ಇದರಲ್ಲಿ ಸಮನ್ವಯತೆ ಕೊರತೆ, ಗೊಂದಲಗಳಿವೆ. ಈ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗಲ್ಲ. ಸರ್ಕಾರದಲ್ಲಿ ಲೋಪಗಳು ಇರುವುದರಿಂದಲೇ ನಾವು ಸಿಎಂ ಭೇಟಿ ಮಾಡಿದೆವು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಇಂದು ಸರ್ಕಾರಕ್ಕೆ 15 ಬೇಡಿಕೆಗಳನ್ನು ಇಟ್ಟಿದ್ದೇವೆ. ನಮ್ಮ ನಿಯೋಗದ ಎಲ್ಲಾ ನಾಯಕರೂ ಮಾತಾಡಿದ್ದೇವೆ. ಆರೋಗ್ಯ, ರೈತರು, ಕಾರ್ಮಿಕರು, ವೃತ್ತಿನಿರತರು, ಆಹಾರ ಧಾನ್ಯ ವಿತರಣೆ, ಅಲ್ಪಸಂಖ್ಯಾತ ಸಮುದಾಯದ ನೋವು, ಗ್ರಾಮೀಣ ಸಮಸ್ಯೆಗಳು, ರೈತರ ಬೆಳೆಗಳಿಗೆ ಬೆಲೆ ಸಿಗದಿರುವುದು, ಶಿಕ್ಷಣ ಸಮಸ್ಯೆಗಳ ಬಗ್ಗೆ ಸಿಎಂ‌ ಗಮನ ಸೆಳೆದಿದ್ದೇವೆ. ಕೋವಿಡ್ ಪರೀಕ್ಷೆ ತೀವ್ರಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ದಿನಸಿ ಕಿಟ್​ಗಳ ವಿತರಣೆಯಲ್ಲಾಗುತ್ತಿರುವ ತಾರತಮ್ಯವನ್ನು ಗಮನಕ್ಕೆ ತಂದಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಹಕಾರ ಕೊಡುವ ಭರವಸೆಯನ್ನು ನಾವು ಕೊಟ್ಟಿದ್ದೇವೆ. ಮುಂಬರುವ ದಿನಗಳಲ್ಲಿ ಕೈಗಾರಿಕೆ, ಸರ್ಕಾರಿ, ಖಾಸಗಿ ನೌಕರರ ಸಮಸ್ಯೆ, ಬ್ಯಾಂಕ್ ವಲಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಒಂದು ವರ್ಗಕ್ಕೆ ತೇಜೋವಧೆ ಆದ ಬಗ್ಗೆಯೂ ನಾವು ಒತ್ತು ಕೊಟ್ಟು ಹೇಳಿದ್ದೇವೆ. ನಮ್ಮ ಮನವಿಯನ್ನು ಆಲಿಸಿ ಸ್ಪಂದಿಸುವ ಭರವಸೆ ನೀಡಿದ್ದು, ಮುಂದೆ ಏನು ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕು ಎಂದರು.

ABOUT THE AUTHOR

...view details