ಕರ್ನಾಟಕ

karnataka

By

Published : Nov 13, 2019, 11:20 PM IST

ETV Bharat / state

ಪಕ್ಷ ಸೇರ್ಪಡೆ ಮತ್ತು ಟಿಕೆಟ್ ಸಂಬಂಧ ಬಿಎಸ್​​ವೈ ಜೊತೆ ಚರ್ಚೆ ನಡೆಸಿದ ಅನರ್ಹ ಶಾಸಕರು

ಸುಪ್ರೀಂಕೋರ್ಟ್ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಫರ್ಧಿಸಬಹುದೆಂದು ತೀರ್ಪು ನೀಡಿದ್ದು, ಇಂದು ನವದೆಹಲಿಯಿಂದ ನೇರೆವಾಗಿ ಅನರ್ಹ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೊತೆ ಪಕ್ಷ ಸೇರ್ಪಡೆ ಮತ್ತು ಟಿಕೆಟ್ ಸಂಬಂಧ ಸಭೆ ನಡೆಸಿದ್ದಾರೆ.

BSY and MLAs meeting

ಬೆಂಗಳೂರು:ಸುಪ್ರೀಂಕೋರ್ಟ್ ತೀರ್ಪಿನ ನಂತರ ಅನರ್ಹ ಶಾಸಕರ ತಂಡ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದು, ಪಕ್ಷ ಸೇರ್ಪಡೆ ಮತ್ತು ಟಿಕೆಟ್ ಸಂಬಂಧ ಸಮಾಲೋಚನೆ ನಡೆಸಿತು.

ನವದೆಹಲಿಯಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನರ್ಹ‌ ಶಾಸಕರ ತಂಡ ವಿಮಾನ ನಿಲ್ದಾಣದಿಂದ ನೇರವಾಗಿ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನಿವಾಸ ಧವಳಗಿರಿಗೆ ಆಗಮಿಸಿತು.‌

ರಮೇಶ್​ ಜಾರಕಿಹೊಳಿ, ಶಂಕರ್, ಪ್ರತಾಪ್‌ ಗೌಡ ಪಾಟೀಲ್, ಬಿ.ಸಿ ಪಾಟೀಲ್, ಶಿವರಾಂ ಹೆಬ್ಬಾರ್, ನಾರಾಯಣಗೌಡ, ಸೋಮಶೇಖರ್, ಗೋಪಾಲಯ್ಯ, ಮುನಿರತ್ನ, , ಸುಧಾಕರ್, ಶ್ರೀಮಂತ್ ಪಾಟೀಲ್ ಒಳಗೊಂಡಂತೆ 11 ಅನರ್ಹ ಶಾಸಕರ ತಂಡ ಸಿಎಂ ಭೇಟಿಯಾಗಿ ರಾತ್ರಿ ಊಟವನ್ನು ಬಿಎಸ್​​​​ವೈ ಜೊತೆಯಲ್ಲೆ ಮುಗಿಸಿ ಮಹತ್ವದ ಸಭೆ ನಡೆಸಿತು.

6 ಅನರ್ಹರು ಗೈರು:
ಎಂಟಿಬಿ ನಾಗರಾಜ್​, ಬೈರತಿ ಬಸವರಾಜು, ಹೆಚ್ ವಿಶ್ವನಾಥ್, ರೋಷನ್ ಬೇಗ್, ಆನಂದ್ ಸಿಂಗ್ ಮತ್ತು ಮಹೇಶ್ ಕುಮಟಳ್ಳಿ ಸಭೆಗೆ ಗೈರಾಗಿದ್ದರು. ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ‌ ಸೇರಿಸಿಕೊಳ್ಳುವ ಕುರಿತ ನಿರ್ಧಾರ, ಚುನಾವಣಾ ಉಸ್ತುವಾರಿಗಳ ನೇಮಕ, ಟಿಕೆಟ್ ನೀಡುವ ಚರ್ಚೆ ಸೇರಿದಂತೆ ಉಪ‌ ಚುನಾವಣೆ ಸಂಬಂಧ ಮಹತ್ವದ ಮಾತುಕತೆ ನಡೆಸಿದರು.‌

ನಾಳೆ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳಿ ನಂತರ ಮತ್ತೊಮ್ಮೆ ಕೋರ್‌ ಕಮಿಟಿ ಸಭೆ ನಡೆಸಿ ಟಿಕೆಟ್ ಹಂಚಿಕೆ ಅಂತಿಮಗೊಳಿಸಲಾಗುತ್ತದೆ. ಯಾರೂ ಯಾವ ಆತಂಕಕ್ಕೂ ಒಳಗಾಗಬೇಕಿಲ್ಲ. ನಿಮಗೆಲ್ಲರಿಗೂ ಟಿಕೆಟ್ ಪಕ್ಕಾ ಎಂದು ಅನರ್ಹ ಶಾಸಕರಿಗೆ ಸಿಎಂ ಭರವಸೆ ನೀಡಿದ್ದು, ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಹಕಾರ ನೀಡುವ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details