ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಹಾರಾಟವನ್ನು ಕುವೈತ್ ಮೂಲದ ಜಜೀರಾ ಏರ್ ಲೈನ್ಸ್ ಆರಂಭಿಸಿದೆ. ಮೊದಲ ವಿಮಾನ ನವೆಂಬರ್ 3ರ ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.
ಕುವೈತ್ ಮೂಲದ ಕಡಿಮೆ ದರದ ಜಜೀರಾ ಏರ್ಲೈನ್ಸ್ ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನಯಾನ ಆರಂಭಿಸಿದೆ. ವಾರದಲ್ಲಿ ಎರಡು ವಿಮಾನಗಳು ಕುವೈತ್ ಮತ್ತು ಬೆಂಗಳೂರು ನಡುವೆ ಹಾರಾಟ ನಡೆಸಲಿವೆ. ಶುಕ್ರವಾರ ಮತ್ತು ಭಾನುವಾರ ಬೆಂಗಳೂರಿನಿಂದ ಕುವೈತ್ಗೆ ವಿಮಾನ ಪ್ರಯಾಣಿಸಲಿದೆ.