ಬೆಂಗಳೂರು:ಇಂದು ಶಾಸಕರು ರಾಜೀನಾಮೆ ನೀಡುವ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯಗೆ ಮೊದಲೇ ತಿಳಿದಿತ್ತು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಸಕರ ರಾಜೀನಾಮೆ ಬಗ್ಗೆ ನಿನ್ನೆಯೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ಇತ್ತು. ನಿನ್ನೆ ರಾತ್ರಿ ವಿಮಾನದಲ್ಲಿ ಬೀದರ್ಗೆ ತೆರಳಬೇಕಿದ್ದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಸಿದ್ದರಾಮಯ್ಯ ಇದೇ ಕಾರಣ ನೀಡಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.
ಇಂದು ಬೆಂಗಳೂರಲ್ಲಿಯೇ ಉಳಿದುಕೊಳ್ಳುವಂತೆ ಖಂಡ್ರೆಗೆ ಸೂಚನೆ ನೀಡಿದ್ದ ಸಿದ್ದರಾಮಯ್ಯಗೆ ಹೇಗೆ ಈ ವಿಚಾರ ತಿಳಿದಿತ್ತು? ಇದನ್ನು ತಡೆಯಲು ಅವರು ಯಾಕೆ ಪ್ರಯತ್ನಿಸಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ. ಶಾಸಕರ ರಾಜೀನಾಮೆ ಬಗ್ಗೆ ಅನುಮಾನ ಬಂದ ಹಿನ್ನೆಲೆ ಸಿದ್ದು ಸೂಚನೆ ನೀಡಿದ್ದರು ಎನ್ನಲಾಗುತ್ತಿದೆ.
ರಾಜೀನಾಮೆ ಸಂಖ್ಯೆ 22 ಕ್ಕೇರುವ ಸಾಧ್ಯತೆ!
ಈಗ ನೀಡಿರುವ 11 ಶಾಸಕರು ಸೇರಿದಂತೆ ಒಟ್ಟು 22 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬ ಖಚಿತ ಮಾಹಿತಿ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ ಎನ್ನಲಾಗಿದೆ.