ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಈ ವೇಳೆ ಬಿಬಿಎಂಪಿ ನೂತನ ಆಯುಕ್ತರು ತನಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಉಪಮೇಯರ್ ಭದ್ರೇಗೌಡ ತಮ್ಮ ಕಾರಿನಲ್ಲಿ ವಾಪಸಾಗಿರುವ ಘಟನೆ ನಡೆಯಿತು.
ನೂತನ ಆಯುಕ್ತರ ಮೇಲೆ ಅಸಮಾಧಾನ: ಅರ್ಧದಲ್ಲೇ ನಗರ ಪ್ರದಕ್ಷಿಣೆ ಕೈಬಿಟ್ಟ ಉಪಮೇಯರ್
ಸಿಎಂ ಯಡಿಯೂರಪ್ಪ ಇಂದು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ಈ ವೇಳೆ ಬಿಬಿಎಂಪಿ ನೂತನ ಆಯುಕ್ತರು ಅವಮಾನ ಮಾಡಿದ್ದಾರೆಂದು ಆರೋಪಿಸಿ, ಉಪಮೇಯರ್ ನಗರ ಪ್ರದಕ್ಷಿಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಉಪಮೇಯರ್ ಭದ್ರೇಗೌಡ , Deputy Mayor Bhadre Gowda
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಭದ್ರೇಗೌಡ, ಕಾಮಗಾರಿ ವೀಕ್ಷಣೆ ವೇಳೆ ನೂತನ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಅವರು ಸ್ವಲ್ವ ಪಕ್ಕಕ್ಕೆ ಬನ್ನಿ ಎಂದರು. ಅದಕ್ಕೆ ನಾನು ಪಕ್ಕಕ್ಕೆ ಹೋಗಿ ಸರ್ ಎಂದೆ. ಆಗ ನಾನು ನನ್ನ ಪಾಡಿಗೆ ನಾನು ನಿಂತಿದ್ದೆ. ಆದರೆ ಮತ್ತೆ ತಮ್ಮ ಕೈಯಿಂದ ನನ್ನನ್ನು ತಳ್ಳಿ ಆ ಕಡೆ ಹೋದರು. ಇಷ್ಟಾದ ಮೇಲೆ ನಾನು ಅವರ ಜೊತೆ ಹೋಗಲ್ಲವೆಂದು ಅನಿಲ್ ಕುಮಾರ್ ವಿರುದ್ಧ ಭದ್ರೇಗೌಡ ಕೆಂಡಾಮಂಡಲವಾದರು.