ಬೆಂಗಳೂರು:ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯನ್ನ ರಾಜ್ಯ ಸರ್ಕಾರ ಸೂಪರ್ ಸೀಡ್ ಮಾಡಿದ್ದು ಈ ಸೂಪರ್ ಸೀಡ್ ಮಾಡಲು ಡಿಸಿಎಂ ಡಾ.ಜಿ.ಪರಮೇಶ್ವರ್ ಕಾರಣ ಎಂಬ ಮಾಜಿ ಶಾಸಕ ಕೆ.ಎನ್. ರಾಜಣ್ಣ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರಕ್ಕೂ ನನಗೂ ಸಂಬಂಧವಿಲ್ಲ: ಪರಮೇಶ್ವರ್ - kannadanews
ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಸದಾಶಿವನಗರ ಬಳಿ ಇರುವ ಸಚಿವ ಡಿ.ಕೆ ಶಿವಕುಮಾರ್ ಮನೆಗೆ ಡಿಸಿಎಂ ಭೇಟಿ ನೀಡಿ ರಾಜ್ಯ ರಾಜಕಾರಣದ ಅತೃಪ್ತ ಶಾಸಕರ ಮನವೊಲಿಕೆ ವಿಚಾರ ಹಾಗೆ ನಾಳೆ ಸದನದಲ್ಲಿ ಏನೆಲ್ಲಾ ಮಾಡಬೇಕು ಅನ್ನೋದ್ರ ಕುರಿತು ಚರ್ಚಿಸಿ ಹೊರ ಬಂದರು.
ಈ ವೇಳೆ ಡಿಸಿಎಂ ಪರಮೇಶ್ವರ್ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ್ದು, ನಾನು ಸ್ಪಷ್ಟವಾಗಿ ಹೇಳ್ತಿನಿ. ನನಗೆ ಅದು ಗೊತ್ತಿಲ್ಲ ಹಾಗೆ ಅದು ನನ್ನ ಇಲಾಖೆ ಅಲ್ಲ. ಹಾಗೆ ಯಾವ ಕಾರಣಕ್ಕೆ ಸೂಪರ್ ಸೀಡ್ ಮಾಡಿದ್ದಾರೆ ಎಂದು ಗೊತ್ತಿಲ್ಲ ನಾನು ಸರ್ಕಾರದಲ್ಲಿ ಇದ್ದಿನಿ ಅಂತಾ ರಾಜಣ್ಣ ಹಾಗೆ ಆರೋಪ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.