ಕರ್ನಾಟಕ

karnataka

ETV Bharat / state

ಭಾಷೆಯ ಅಭಿವೃದ್ಧಿಗಾಗಿ ಮಂಡಳಿ ಮಾಡಿಲ್ಲ; ಮರಾಠಾ ಜನಾಂಗದ ಅಭಿವೃದ್ಧಿಗಾಗಿ ಮಾಡಿದ್ದು; ಡಿಸಿಎಂ - Karnataka Bundh News

ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್ ನಡೆಸಲು ನಿರ್ಧಾರ ಮಾಡಲಾಗಿದ್ದು, ಡಿ. 5ರೊಳಗೆ ಪ್ರಾಧಿಕಾರ ರಚನೆ ಕೈಬಿಡಬೇಕು, ಇಲ್ಲದಿ.ದ್ದರೆ ಬಂದ್ ಮಾಡಲಾಗುತ್ತೆ ಅಂತಾ ಎಚ್ಚರಿಸಿದ್ದಾರೆ..

DCM Ashwath Narayan reaction about Karnataka Bundh
ಡಿಸಿಎಂ ಅಶ್ವಥ್ ನಾರಾಯಣ

By

Published : Nov 17, 2020, 6:41 PM IST

ಬೆಂಗಳೂರು: ಕನ್ನಡ ಪರ ಸಂಘಟನೆಗಳು ಕರೆ ನೀಡಲು ಮುಂದಾಗಿರುವ 'ಮತ್ತೆ ಕರ್ನಾಟಕ ಬಂದ್​ಗೆ' ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾಷೆಯ ಅಭಿವೃದ್ಧಿಗಾಗಿ ಮಂಡಳಿ ಮಾಡಿಲ್ಲ, ಬದಲಿಗೆ ಮರಾಠ ಜನಾಂಗದ ಅಭಿವೃದ್ಧಿಗೆ ಮಂಡಳಿ ಮಾಡಲಾಗಿದೆ. ಹಲವು ಜಾತಿ ಜನಾಂಗಕ್ಕೆ ಅಭಿವೃದ್ಧಿ ಮಂಡಳಿ ಇದೆ. ಅದೇ ರೀತಿ ಇದು ಕೂಡ ಒಂದು. ಇಲ್ಲಿ ತಾರತಮ್ಯ ಬರುವುದಿಲ್ಲ.

ಇದು ಭಾಷೆಯ ವಿರುದ್ಧವಲ್ಲ. ಅವರೂ ಕನ್ನಡಿಗರೇ, ಅವರೂ ಇಲ್ಲಿಯವರೇ. ಸೋದರತ್ವ, ಸಹಬಾಳ್ವೆ ನಮ್ಮ ನಡುವೆ ಇರಬೇಕು. ಅವರೂ ನಮ್ಮೊಂದಿಗೆ ನೂರಾರು ವರ್ಷಗಳಿಂದ ಬಾಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ

ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್ ನಡೆಸಲು ನಿರ್ಧಾರ ಮಾಡಲಾಗಿದ್ದು, ಡಿ. 5ರೊಳಗೆ ಪ್ರಾಧಿಕಾರ ರಚನೆ ಕೈಬಿಡಬೇಕು, ಇಲ್ಲದಿದ್ದರೆ ಬಂದ್ ಮಾಡಲಾಗುತ್ತೆ ಅಂತಾ ಎಚ್ಚರಿಸಿದ್ದಾರೆ.

ABOUT THE AUTHOR

...view details