ಕರ್ನಾಟಕ

karnataka

ETV Bharat / state

'ಬ್ರೀತ್ ಇಂಡಿಯಾ'ಗೆ ಚಾಲನೆ ನೀಡಿದ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ - ಆಮ್ಲಜನಕ ಸಾಂದ್ರೀಕೃತ ಉಪಕರಣಗಳು

ಕೋವಿಡ್ ಇಂಡಿಯಾ ಅಭಿಯಾನ ನಡೆಸುತ್ತಿರುವ ಬ್ರೀತ್ ಇಂಡಿಯಾ ಉಪಕ್ರಮಕ್ಕೆ ಡಿಸಿಎಂ ಡಾ. ಸಿ.ಎನ್​. ಅಶ್ವತ್ಥ್​​ ನಾರಾಯಣ್​ ಚಾಲನೆ ನೀಡಿದ್ರು.

dcm
dcm

By

Published : May 19, 2021, 8:59 PM IST

ಬೆಂಗಳೂರು:ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಕೋವಿಡ್ ಇಂಡಿಯಾ ಅಭಿಯಾನ ನಡೆಸುತ್ತಿರುವ ಬ್ರೀತ್ ಇಂಡಿಯಾಗೆ ಚಾಲನೆ ನೀಡಿದರು.

ಮೀಸಲು ಪೊಲೀಸ್ ಪಡೆಯ ಎಡಿಜಿಪಿ ಅಲೋಕ್ ಕುಮಾರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಹಲವಾರು ಆಮ್ಲಜನಕ ಸಾಂದ್ರೀಕೃತ ಉಪಕರಣಗಳು, ಡಿಫಿಬ್ರಿಲೇಟರ್​ಗಳು ಮತ್ತು ಬಿಐಪಿಎಪಿ ಯಂತ್ರಗಳು, ರೋಗಿಗಳನ್ನು ಪರಿವೀಕ್ಷಿಸುವ ಮಾನಿಟರ್​ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಇಷ್ಟು ಕಡಿಮೆ ಸಮಯದಲ್ಲಿ ಒಗ್ಗೂಡಿ ಈಗಾಗಲೇ 6 ಕೇಂದ್ರಗಳನ್ನು ಬೆಂಬಲಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು, ‘ಬ್ರೀತ್ ಇಂಡಿಯಾ’ ಉಪಕ್ರಮದಿಂದ ಕರ್ನಾಟಕ ರಾಜ್ಯಾದ್ಯಂತ 7 ಸಮುದಾಯ ಆಮ್ಲಜನಕ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಅಗತ್ಯವಿರುವ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಕೋವಿಡ್ ಇಂಡಿಯಾ ಅಭಿಯಾನಕ್ಕೆ ಧನ್ಯವಾದಗಳು. ಆಸ್ಪತ್ರೆಗಳಲ್ಲಿನ ಆಮ್ಲಜನಕದ ಅಗತ್ಯವನ್ನು ಸರಾಗಗೊಳಿಸುವಲ್ಲಿ ಮತ್ತು ರಾಜ್ಯದ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚುಸುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸಿದೆ ಎಂದರು.

ಐಸಿಎಟಿಟಿ ಫೌಂಡೇಶನ್‌ನ ಅಧ್ಯಕ್ಷ ಮತ್ತು ಕೋವಿಡ್ ಇಂಡಿಯಾ ಅಭಿಯಾನದ ಸಹ-ಸಂಸ್ಥಾಪಕ ಡಾ. ಶಾಲಿನಿ ನಲ್ವಾಡ್ ಮಾತನಾಡಿ, “ನಾವು ಕೋವಿಡ್ ಮೊದಲ ಅಲೆಯಿಂದ ಬಹಳ ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯರಾಗಿದ್ದೇವೆ, 4 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಎನ್ 95 ಮಾಸ್ಕ್​ಗಳು, ಪಿಪಿಇ ಕಿಟ್‌ಗಳು ಮತ್ತು ಇತರ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಶಕ್ತಗೊಳಿಸಿದ್ದೇವೆ. ಫ್ರಂಟ್ ಲೈನ್ ವರ್ಕರ್ಸ್​ಗೆ ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯಗಳನ್ನು ನಿಯೋಜಿಸುವ ಮೂಲಕ ಸಾಮಾನ್ಯ ಹಾಸಿಗೆಗಳನ್ನು ಆಮ್ಲಜನಕಯುಕ್ತ ಹಾಸಿಗೆಗಳಾಗಿ ಪರಿವರ್ತಿಸುವತ್ತ ಗಮನ ಹರಿಸಿದ್ದೇವೆ ” ಎಂದು ತಿಳಿಸಿದರು.

ABOUT THE AUTHOR

...view details